ಅಸ್ಸಾಂನ ಕಾಮಕ್ಯ ಮಂದಿರದಲ್ಲಿ ದೇವೇಗೌಡರಿಂದ ವಿಶೇಷ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.19-ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಕ್ಯ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.  ದೇವೇಗೌಡರು, ಪತ್ನಿ ಚೆನ್ನಮ್ಮ, ಪುತ್ರಿಯರಾದ ಅನುಸೂಯ, ಶೈಲಜಾ ಅವರೊಂದಿಗೆ ಗುವಾಹಟಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಹ್ಯಾರಿ ಸಹ ದೇವೇಗೌಡರೊಂದಿಗೆ ಸಾಥ್ ನೀಡಿದ್ದಾರೆ. ಗುವಾಹಟಿಯ ನೀಲಛಲ ಬೆಟ್ಟದ ಮೇಲೆ ಕಾಮಕ್ಯ ಮಂದಿರವಿದ್ದು, ಶಕ್ತಿಪೀಠ ಎಂದು ಕರೆಯಲಾಗುತ್ತದೆ.

Facebook Comments