ಮಂಗಳೂರು : ಡೆತ್‍ನೋಟ್ ಬರೆದಿಟ್ಟು ವೃದ್ಧ ದಂಪತಿ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಫೆ.19- ಡೆತ್‍ನೋಟ್ ಬರೆದಿಟ್ಟು ವೃದ್ಧ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟೆಕಾರು ಬೀದಿಯಲ್ಲಿ ನಡೆದಿದೆ. ದೇವರಾಜು (74), ವಸಂತಿ (64) ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ.

ದೇವರಾಜ್ ಅವರು ಆಕಾಶವಾಣಿಯಲ್ಲಿ ಚಾಲಕ ವೃತ್ತಿಯಲ್ಲಿದ್ದು ನಿವೃತ್ತರಾಗಿದ್ದರು. ಮೃತ ದಂಪತಿಗೆ ಮಕ್ಕಳಿರಲಿಲ್ಲ, ಈ ವಿಚಾರವಾಗಿ ಬಹಳ ಕಾಲದಿಂದ ಇವರು ಮಾನಸಿಕವಾಗಿ ನೊಂದಿದ್ದರು, ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಇದೀಗ ಶಂಕಿಸಲಾಗುತ್ತಿದೆ.

ಮಂಗಳವಾರ ಬೆಳಿಗ್ಗೆ ಎಂದಿನಂತೆ ಜಯಂತಿ ಅವರ ಸಹೋದರ ಹಾಲು ಕೊಡಲೆಂದು ಮನೆಗೆ ಬಂದ ಸಂದರ್ಭದಲ್ಲಿ ತನ್ನ ತಂಗಿ ಮತ್ತು ಭಾವ ನೇಣಿಗೆ ಶರಣಾಗಿರುವ ವಿಷಯ ಅವರಿಗೆ ಗೊತ್ತಾಗಿದೆ. ಈ ಮೂಲಕ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೂ ಮುನ್ನ ಸಹೋದರನ ಮಗಳಿಗೆ ತನ್ನ ಆಸ್ತಿಯನ್ನು ಬರೆದಿಟ್ಟು, ನಾಯಿ-ಬೆಕ್ಕನ್ನು ಚೆನ್ನಾಗಿ ನೋಡಿಕೋ ಎಂದು ಡೆತ್‍ನೋಟ್ ಉಲ್ಲೇಖಿಸಿದ್ದಾರೆ. ಸ್ಥಳಕ್ಕೆ ಉಲ್ಲಾಳ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin