ಬ್ಯಾಂಕ್ ನೋಟಿಸ್’ಗೆ ಹೆದರಿ ರೈತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಫೆ.19- ಸಾಲಬಾಧೆಯಿಂದ ನೊಂದಿದ್ದ ರೈತ ಬ್ಯಾಂಕ್ ನೋಟಿಸ್ ನಿಂದ ಹೆದರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಗುಡಿಗೇನಹಳ್ಳಿ ನಡೆದಿದೆ.  ಗ್ರಾಮದ ಶಿವಲಿಂಗಯ್ಯ(40) ಆತ್ಮಹತ್ಯೆ ಮಾಡಿಕೊಂಡಿರುವ ರೈತ.

ಶಿವಲಿಂಗಯ್ಯ ತಮ್ಮ ಜಮೀನಿನಲ್ಲಿ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‍ನೋಟ್ ಬರೆದಿಟ್ಟಿದ್ದಾರೆ.
ಬ್ಯಾಂಕ್ ಸಾಲ ಸೇರಿದಂತೆ ಸುಮಾರು 10 ಲಕ್ಷ ರೂ. ಸಾಲ ಮಾಡಿದ್ದರು. 4 ಎಕರೆ ಜಮೀನಿನಲ್ಲಿ ಕಬ್ಬು, ಭತ್ತ ಬೆಳೆಯುತ್ತಿದ್ದರು. ಈ ಬಾರಿ ನೀರಿಲ್ಲದೆ ಬೆಳೆ ಒಣಗಿಹೋಗಿತ್ತು. ಇದರಿಂದ ರೈತ ನೊಂದಿದ್ದರು. ಇದೇ ವೇಳೆ ಬ್ಯಾಂಕ್‍ನಿಂದ ನೋಟಿಸ್ ಬಂದಿದ್ದರಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆರಗೋಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments