ಪುಲ್ವಾಮಾ ದಾಳಿಯಿಂದ ದಿಗ್ಬ್ರಾಂತರಾಗಿ ಸೈನಿಕನ ಪತ್ನಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ದ್ವಾರಕ,ಫೆ.19- ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಉಗ್ರರ ದಾಳಿಯಿಂದ ದಿಗ್ಬ್ರಮೆಗೊಂಡಿದ್ದ ಸೈನಿಕರೊಬ್ಬರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‍ನ ದ್ವಾರಕದಲ್ಲಿ ನಡೆದಿದೆ.

ಸೈನಿಕ ಭೂಪೇಂದ್ರ ಶಿನ್ ಅವರ 22 ವರ್ಷದ ಪತ್ನಿ ಮೀನಾಕ್ಷಿ ಜೇಥ್ವಾ ಎಂಬುವರು ಪುಲ್ವಾಮಾ ದಾಳಿಯಿಂದ ದಿಗ್ಬ್ರಾಂತರಾಗಿದ್ದರು. ಅಲ್ಲದೆ ಗಡಿಯುವ ಕಾಯುವ ಸೈನಿಕರಿಗೆ ಇಲ್ಲಿ ಯಾವ ರಕ್ಷಣೆಯೂ ಇಲ್ಲ.

ತನ್ನ ಪತಿ ಇಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆತಂಕಗೊಂಡಿದ್ದರು ಎಂದು ಹೇಳಲಾಗಿದೆ. ಸೇನೆಯಲ್ಲಿ ಪತಿಯ ಜೀವಕ್ಕೆ ರಕ್ಷಣೆ ಇಲ್ಲ ಎಂದು ಆತಂಕದಲ್ಲೇ ಇದ್ದ ಸೈನಿಕನ ಪತ್ನಿ ಪುಲ್ವಾಮಾ ದಾಳಿ ನೆನೆದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಭೂಪೇಂದ್ರ ಶಿನ್ ಅವರು ಜಮ್ಮು-ಕಾಶ್ಮೀರದ ಗುಲ್ಮಾರ್ಗ್‍ನಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ಮೀನಾಕ್ಷಿ ಅವರನ್ನು ವಿವಾಹವಾಗಿದ್ದರು.

Facebook Comments