ಚನ್ನರಾಯಪಟ್ಟಣದಲ್ಲಿ ಹಾಡಹಗಲೇ ತಂದೆ-ಮಗಳ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ. ಫೆ. 19 : ಚನ್ನರಾಯಪಟ್ಟಣದ ನಡು ರಸ್ತೆಯಲ್ಲಿ ಮಟ ಮಟ ಮಧ್ಯಾಹ್ನ ನಡೆದಿದ್ದ ತಂದೆ ಮಗಳ ಧಾರುಣ ಹತ್ಯೆ ಆರೋಪಿಯನ್ನು ಹಾಸನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರೀತಿಸಿ ಮದುವೆ ಯಾಗಿದ್ದ ಪತ್ನಿ ಪತಿಯ ಕಿರುಕುಳದಿಂದ ಬೇಸತ್ತು ಪತಿಗೆ ವಿಚ್ಚೇದನ ನೀಡಲು ಮುಂದಾಗಿದ್ದರಿಂದ ರೋಷ ಗೊಂಡ ಕಟುಕ ಪತಿ ನಂಜೇಗೌಡ ನಡು ರಸ್ತೆಯಲ್ಲಿ ತನ್ನ ಪತ್ನಿಯೊಂದಿಗೆ ಆಕೆಯ ತಂದೆಯನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ.

ಬಂಧಿತ ಆರೋಪಿ ತಾಲ್ಲೂಕಿನ ಯಲಿಯೂರು ಗ್ರಾಮದ ನಂಜೇಗೌಡ ಉರುಫ್ ನಂದೀಶ್ ಆಗಿದ್ದು. ಆತ ಜನವರಿ 30ರ ಅಪ ರಾಹ್ನ 2 ಗಂಟೆ ಸಮಯದಲ್ಲಿ ಪಟ್ಟಣದ ವಿಜಯ ಬ್ಯಾಂಕ್‍ಗೆ ಸನ್ನಿಹದಲ್ಲಿ ನೂರಾರು ಜನರ ಸಮ್ಮುಖದಲ್ಲಿ ನಡೆದಿದ್ದ ಕೊಲೆಯಾಗಿತ್ತು.

ಏನು ನಡೆಯುತ್ತಿದೆ ಎನ್ನುವಷ್ಟರಲ್ಲಿ ವಕೀಲರ ಕಛೇರಿ ಕಡೆಗೆ ಹೆಜ್ಜೆ ಹಾಕುತ್ತಿದ್ದ ತಂದೆ ಮಗಳನ್ನು ವ್ಯಕ್ತಿಯೋರ್ವ ಅಡ್ಡಗಟ್ಟಿ ಮಚ್ಚಿನಿಂದ ಧಾರುಣವಾಗಿ ಕೊಚ್ಚಿ ಕೊಲೆ ಮಾಡಿದ್ದ.  ಬಳಿಕ ಚಾನಲ್ ಏರಿಯ ಮೇಲೆ ಬೈಕ್ ನಿಲ್ಲಿಸಿ ತಾನು ಆತ್ಮಹತ್ಯೆ ಮಾಡಿ ಕೊಂಡಿ  ರುವುದಾಗಿ ಬಿಂಬಿಸಲು ಯತ್ನಿಸಿದ್ದ.

ಪೊಲೀಸರು ಮೊದ ಮೊದಲು ಆತ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿರಬಹುದೆಂದು  ಶಂಕಿಸಿದ್ದರು. ಆದರೆ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಆರೋಪಿಯ ಕಳ್ಳಾಟ ಕಂಡು  ಬಂದಿತ್ತು. ಈ ನಿಟ್ಟಿನಲ್ಲಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರಿಗೆ ಕೊಲೆ  ಯಾದ ತಿಂಗಳೊಳಗೆ ಆರೋಪಿ ತಾಲ್ಲೂಕಿನಲ್ಲಿಯೇ ಸಿಕ್ಕಿ ಬಿದ್ದಿದ್ದಾನೆ.

ಅಂದು ಅಪರಾಹ್ನ ನಡೆದಕೊಲೆಯಲ್ಲಿ ಆರೋಪಿ ಪತ್ನಿ ದಿವ್ಯಾ (28) ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ತೀವ್ರವಾಗಿ ಗಾಯಗೊಂಡಿದ್ದ ದಿವ್ಯಾ ತಂದೆ ಪ್ರಕಾಶ್ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಆರೋಪಿ ನಂದೀಶನನ್ನು ಬಂಧಿಸಿದ ಪೊಲೀಸರು ಆತನನ್ನು ಠಾಣೆಗೆ ಕರೆ ತರಲಾದ ಮಾಹಿತಿ ಪಡೆದ ಸಾರ್ವಜನಿಕರು ಆತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ. ಆತನನ್ನು ಸಾರ್ವಜನಿಕರ ಕೈಗೊಪ್ಪಿಸು ವಂತೆ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಪತ್ರಿಕಾಗೊಷ್ಠಿ ಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಪ್ರಕಾಶ್ ಗೌಡ ಅವರು ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಡಿ.ವೈ.ಎಸ್.ಪಿ ಲಕ್ಷ್ಮೇಗೌಡ, ವೃತ್ತ ನಿರೀಕ್ಷಕ ಕಾಂತರಾಜು, ಉಪ ನಿರೀಕ್ಷಕ ಮಂಜುನಾಥ್, ಕಿರಣ್ ಕುಮಾರ್, ಸಿಬ್ಬಂದಿಗಳಾದ ರವಿಕುಮಾರ್, ತೋಪೇಗೌಡ, ಜಯಪ್ರಕಾಶ್, ನಾರಾಯಣ, ಸುರೇಶ್, ಬೈರಮಟ್ಟಿ, ಲೋಹಿತಾಶ್ವ, ಅರುಣ್, ಸುರೇಶ್ ಮಹೇಶ್ ಅವರ ಕಾರ್ಯವೈಖರಿಯನ್ನು
ಪ್ರಶಂಸಿಸಿದ್ದಾರೆ.

Facebook Comments

Sri Raghav

Admin