ಜಾತಿ ತಾರತಮ್ಯ ನಿರ್ಮೂಲನೆಗೆ ಪ್ರಧಾನಿ ಮೋದಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

ವಾರಣಾಸಿ, ಫೆ.19- ಸಾಮಾಜಿಕ ಪಿಡುಗಾಗಿರುವ ಜಾತೀಯತೆ ಮತ್ತು ಜಾತಿ ತಾರತಮ್ಯವನ್ನು ನಿರ್ಮೂಲನೆ ಮಾಡುವಂತೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸ್ವಹಿತಾಸಕ್ತಿ ಮತ್ತು ಸ್ವಾರ್ಥಕ್ಕಾಗಿ ಇದಕ್ಕೆ ಪ್ರಚೋದನೆ ನೀಡುವವರನ್ನು ಗುರುತಿಸುವಂತೆ ಸಲಹೆ ಮಾಡಿದ್ದಾರೆ.ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿಂದು 2900ಕೋಟಿ ರೂ. ವೆಚ್ಚ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆಗಳಿಗೆ ಚಾಲನೆ ನೀಡಿದರು.

ಸಂತ ರವಿದಾಸ್ ಅವರ ಜನ್ಮಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕಾಗಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೇ ಸರ್ವರಿಗೂ ಸರಕಾರಿ ಸೌಲಭ್ಯ ಮತ್ತು ಯೋಜನೆಗಳು ಲಭಿಸುವಂತಾಗಬೇಕೆಂದು ಅವರು ಸಲಹೆ ಮಾಡಿದರು.

ಜಾತೀಯತೆ ಎಂಬುವುದು ಸಾಮಾಜಿಕ ಸೌಹಾರ್ದತೆಗೆ ದೊಡ್ಡ ಅಡಚಣೆಯಾಗಿದೆ. ಈ ಪಿಡುಗನ್ನು ಸಮಾಜದಿಂದ ನಿರ್ಮೂಲನೆ ಮಾಡಬೇಕು ಎಂದು ಅವರು ಕರೆ ನೀಡಿದರು.

ಇದಕ್ಕೂ ಮುನ್ನ ಪ್ರಧಾನಿ ಅವರು, ವಾರಣಾಸಿಯಲ್ಲಿ ಭಾರತೀಯ ರೈಲ್ವೆ ಇಲಾಖೆಯ ಡೀಸೆಲ್ ಇಂಜಿನ್‍ನಿಂದ ವಿದ್ಯುತ್ ಇಂಜಿನ್ ಆಗಿ ಪರಿವರ್ತಿವಾಗಿ ಲೋಕೋಮೋಟಿವ್ ತಂತ್ರಜ್ಞಾನಕ್ಕೆ ಚಾಲನೆ ನೀಡಿದರು.

ತಮ್ಮ ಕ್ಷೇತ್ರದಲ್ಲಿ ಅವರು, ಫೆ .14ರಂದು 2900ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಬೇಕಿತ್ತು. ಆದರೆ ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಈ ಸಮಾರಂಭವನ್ನು ಮುಂದೂಡಲಾಗಿತ್ತು.

Facebook Comments