ಭಾರತ- ಆಸ್ಟ್ರೇಲಿಯಾ ಟ್ವೆಂಟಿ- 20 ಸಮರದ ಟಿಕೆಟ್‍ಗಳು ಸೋಲ್ಡ್ ಔಟ್ ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.19- ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಈಗ ತಾಯ್ನಾಡಿನಲ್ಲಿ ಕಾಂಗರೂಗಳ ಬೇಟೆಗೆ ಸಜ್ಜಾಗಿ ನಿಂತಿದೆ. ಫೆಬ್ರುವರಿ 27 ರಂದು ಉದ್ಯಾನಗರಿಯಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ ನಡುವೆ 2ನೆ ಟ್ವೆಂಟಿ-20 ಚುಟುಕು ಸಮರವೂ ನಡೆಯಲಿದ್ದು, ಇಂದಿನಿಂದ ಟಿಕೆಟ್‍ಗಳ ಮಾರಾಟ ಜೋರಾಗಿ ನಡೆದಿದೆ.

ಕ್ರಿಕೆಟ್ ಪ್ರೇಮಿಗಳು ತಮ್ಮ ನೆಚ್ಚಿನ ಆಟಗಾರರ ಆಟವನ್ನು ಮೈದಾನ ದಲ್ಲೇ ಕುಳಿತು ಕಣ್ತುಂಬಿಕೊಳ್ಳುವ ಸಲುವಾಗಿ ಸರದಿ ಸಾಲಿನಲ್ಲಿ ನಿಂತು ಟಿಕೆಟ್‍ಗಳ ಖರೀದಿಗಾಗಿ ಕಾದು ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಕಬ್ಬನ್ ರಸ್ತೆಯ ಬಳಿ ಇರುವ ಗೇಟ್‍ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ರಿಕೆಟ್ ಪ್ರೇಮಿಗಳ ನೂಕುನುಗ್ಗಲು ಹೆಚ್ಚಾಗಿದ್ದರೆ, ಮಹಿಳೆಯರು ಹಾಗೂ ಯುವತಿಯರು ಕೂಡ ತಮ್ಮ ನೆಚ್ಚಿನ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್‍ಶರ್ಮಾ, ಮಹೇಂದ್ರಸಿಂಗ್ ಧೋನಿ, ಲೋಕಲ್ ಬಾಯ್ ಕೆ.ಎಲ್. ರಾಹುಲ್ ಅವರನ್ನು ನೋಡುವ ಸಲುವಾಗಿ ಟಿಕೆಟ್ ಖರೀದಿಗಾಗಿ ಸಾಲಿನಲ್ಲಿ ನಿಂತಿದ್ದರು.

ಟಿಕೆಟ್ ಸಿಕ್ಕ ಸಂತಸದಲ್ಲಿ ಕೆಲವರಿದ್ದರು, ಇನ್ನು ಕೆಲವರು ಸುಡು ಬಿಸಿನಲ್ಲಿ ಕಾದು ನಿಂತಿದ್ದರು.

Facebook Comments