ಸಿ.ಟಿ.ರವಿ ಕಾರು ಅಪಘಾತ, ಬಿಜೆಪಿ ಕೊಟ್ಟ ಸ್ಪಷ್ಟನೆ ಏನು ಗೊತ್ತೇ ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.19- ಶಾಸಕ ಸಿ.ಟಿ.ರವಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಬಿಜೆಪಿ ಸ್ಪಷ್ಟನೆ ನೀಡಿದ್ದು, ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವುದು ನೋವು ತಂದಿದೆ, ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದೆ.

ಕಾರು ಅಪಘಾತವಾದ ವೇಳೆ ಶಾಸಕ ಸಿ.ಟಿ.ರವಿ, ಮೃತದೇಹಗಳನ್ನು ಅಲ್ಲಿಂದ ಸ್ಥಳಾಂತರಿಸುವಾಗ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಾಗ ಸ್ಥಳದಲ್ಲಿಯೇ ಇದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.

ಶಾಸಕ ರವಿ ಕಾರು ಓಡಿಸುತ್ತಿರಲಿಲ್ಲ, ಅವರಿಗೆ ಕುಡಿಯುವ ಅಭ್ಯಾಸವೂ ಇಲ್ಲ. ಸಬ್‍ಇನ್ಸ್‍ಪೆಕ್ಟರ್ ಅನುಮತಿ ಮೇರೆಗೆ ಸಿ.ಟಿ.ರವಿ ಅವರು ಸ್ಥಳದಿಂದ ಆಸ್ಪತ್ರೆಗೆ ತೆರಳಿದ್ದರು. ಘಟನೆಯಿಂದ ಅವರಿಗೆ ಎದೆ ನೋವಾಗಿತ್ತು, ಡಾಕ್ಟರ್ ಬಳಿ ಹೋಗಿ ಚೆಕಪ್ ಮಾಡಿಸಿ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದೆ.

ಮುಂದಿನ ತನಿಖೆಗಾಗಿ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರವಿ ಅವರಿಗೆ ಸಣ್ಣ ಪ್ರಮಾಣದ ಎದೆನೋವಿದ್ದು, ವಿಶ್ರಾಂತಿಯಲ್ಲಿ ಇದ್ದಾರೆ ಎಂದು ಪ್ರಟಕಣೆ ತಿಳಿಸಿದೆ.

Facebook Comments