ಬ್ರೇಕಿಂಗ್ : ‘ಭಾರತ ನಮ್ಮ ಮೇಲೆ ದಾಳಿ ಮಾಡಿದರೆ ಸುಮ್ಮನೆ ಕೂರಲ್ಲ’ : ಇಮ್ರಾನ್ ಖಾನ್

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್,ಫೆ.19- ಪುಲ್ವಾಮಾ ಭಯೋತ್ಪಾದಕರ ದಾಳಿಗೆ ಪಾಕಿಸ್ತಾನ ಕುಮ್ಮಕ್ಕು ನೀಡಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇದ್ದಲ್ಲಿ ಆ ಬಗ್ಗೆ ಸಮಗ್ರ ತನಿಖೆ ನಡೆಸಲು ಮತ್ತು ತನಿಖೆ ನಡೆಸಲು ಪಾಕ್ ಬದ್ಧವಾಗಿದೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.

ನಮ್ಮದು ಹಳೆಯ ಪಾಕಿಸ್ತಾನವಲ್ಲ ಹೊಸ ಪಾಕಿಸ್ತಾನ ಯುದ್ಧವನ್ನು ಆರಂಭಿಸುವುದು ಸುಲಭ ಅದನ್ನು ಕೊನೆಗೊಳಿಸುವುದು ತುಂಬಾ ಕಷ್ಟ ಯುದ್ಧ ಆರಂಭವಾದರೆ ಅದರ ಪರಿಣಾಮ ಏನಾಗುತ್ತದೆ ಎಂಬುದು ದೇವರೆ ಬಲ್ಲ ಎಂದು ಖಾನ್ ಹೇಳಿದರು.

ಇದೇ ವೇಳೆ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ನಾವೂ ಸುಮ್ಮನಿರುವುದಿಲ್ಲ ನಾವೂ ಕೂಡ ಪ್ರತಿದಾಳಿ ನಡೆಸುತ್ತೇವೆ. ಈ ವಿಷಯದಲ್ಲಿ ಎರಡನೇ ಆಯ್ಕೆ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ.

ಇಸ್ಲಾಮಾಬಾದ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸುವಂತೆ ವ್ಯಾಪಕ ಕೂಗು ಕೇಳಿ ಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಪುಲ್ವಾಮಾ ದಾಳಿಗೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಅಥವಾ ಪಾಕ್ ಕೈವಾಡಯಿದೆ ಎಂಬ ಬಗ್ಗೆ ಭಾರತ ಆರೋಪಿಸುತ್ತಲೇ ಇದೆ. ಆದರೆ ಇದಕ್ಕೆ ಏನು ಸಾಕ್ಷಿ ಎಂಬ ಪ್ರಶ್ನಿಸಿದ ಅವರು, ಈ ಬಗ್ಗೆ ಭಾರತದ ಬಳಿ ಪುರಾವೆಗಳಿದ್ದರೆ ಅದನ್ನು ನೀಡಲಿ ಅದು ನಿಜವಾಗಿದ್ದರೆ ನಾವು ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಧಾನಿ ಹೇಳಿದರು.

Facebook Comments

Sri Raghav

Admin