ಮದುವೆ ಮೆರವಣಿಗೆ ಮೇಲೆ ಬಸ್ ಹರಿದು 13 ಮಂದಿ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ಪ್ರತಾಪ್‍ಗಢ್ (ರಾಜಸ್ತಾನ), ಫೆ.19- ವೇಗವಾಗಿ ಬರುತ್ತಿದ್ದ ಟ್ರಕ್ ಮದುವೆ ಕಾರ್ಯಕ್ರಮದಲ್ಲಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಹರಿದ ಪರಿಣಾಮ 13 ಮಂದಿ ಮೃತಪಟ್ಟು 18 ಜನರು ಗಾಯಗೊಂಡಿರುವ ಘಟನೆ ರಾಜಸ್ತಾನದ ಪ್ರತಾಪ್ ಗಢ್ ಜಿಲ್ಲೆಯಲ್ಲಿ ಕಳೆದ ತಡರಾತ್ರಿ ನಡೆದಿದೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು , ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಇದೆ. ರಾಜ್ಯ ಹೆದ್ದಾರಿ 113ರ ರಾಮದೇವ ದೇವಸ್ಥಾನ ಬಳಿ ಈ ಅಪಘಾತ ಸಂಭವಿಸಿದ್ದು, ನಿಂಬಹೆರಾದಿಂದ ಬಾನ್ಸ್ವಾರಾಕ್ಕೆ ಹೋಗುತ್ತಿದ್ದ ಟ್ರಕ್ ರಸ್ತೆ ಬದಿ ಹೋಗುತ್ತಿದ್ದ ಮದುವೆ ಮೆರವಣಿಗೆಯ ಜನರ ಮೇಲೆ ಹರಿದು ಈ ದುರ್ಘಟನೆ ಸಂಭವಿಸಿದೆ ಎಂದು ಚೋಟಿ ಸದ್ರಿ ಡಿಎಸ್‍ಪಿ ವಿಜಯ್ ಪಾಲ್ ಸಿಂಗ್ ಸಂಧು ತಿಳಿಸಿದ್ದಾರೆ.

ಅಪಘಾತದ ವಿಷಯ ಕೇಳಿ ತೀವ್ರ ದುಃಖವಾಗಿದೆ. ಮೃತ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಹೇಳಿದ್ದಾರೆ.

ಗಾಯಗೊಂಡವರನ್ನು ಚೋಟಿ ಸದ್ರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಗಾಯಗೊಂಡವರನ್ನು ಉದೈಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ.

Facebook Comments

Sri Raghav

Admin