ಒಳ ಉಡುಪು ಧರಿಸದೇ ಶಾಲೆಗೆ ಹೋಗಿದ್ದಳಂತೆ ಅಲಿಯಾ..! ಮುಂದೇನಾಯ್ತು ..?

ಈ ಸುದ್ದಿಯನ್ನು ಶೇರ್ ಮಾಡಿ

ಬಾಲಿವುಡ್ ಕ್ಯೂಟ್ ನಟಿ ಅಲಿಯಾ ಭಟ್ ಬಾಕ್ಸ್ ಆಫೀಸ್‍ನ ಕಣ್ಮಣಿ. ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯತೆ ಜೊತೆ ಬಹುಬೇಡಿಕೆಯ ಪ್ರತಿಭಾವಂತ ಮುದ್ದಿನ ತಾರೆಯೂ ಆಗಿದ್ದಾಳೆ. ಈಕೆ ಬಿ-ಟೌನ್ ಖ್ಯಾತ ನಿರ್ದೇಶಕ ಮಹೇಶ್‍ಭಟ್ ಮತ್ತು ನಟಿ-ನಿರ್ದೇಶಕಿ ಸೋನಿ ರಾಝ್‍ದಾನ್ ಮಗಳು.

ಈಕೆಯ ಸಹೋದರಿ ಪೂಜಾ ಭಟ್ ಕೂಡ ಪ್ರತಿಭಾವಂತ ತಾರೆ ಮತ್ತು ನಿರ್ದೇಶಕಿ. ಇಂಥ ಕುಟುಂಬದ ಹಿನ್ನೆಲೆ ಹೊಂದಿರುವ ಅಲಿಯಾಗೆ ಪ್ರತಿಭೆ ಮತ್ತು ನಟನೆ ರಕ್ತಗತ ಬಳುವಳಿ. ಈಕೆಯ ಬಾಲ್ಯ ಹೇಗಿತ್ತು ಎಂಬ ಆಸಕ್ತಿ ಹೊಂದಿರುವವರಿಗೆ ಇಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳಿವೆ.

ಅಲಿಯಾ ತನ್ನ ತಾಯಿ ಸೋನಿ ಜೊತೆ ಜನಪ್ರಿಯ ಟಾಕ್‍ಶೋದಲ್ಲಿ ಭಾಗವಹಿಸಿದ್ದಳು. ಚರ್ಚೆ ಸಂದರ್ಭದಲ್ಲಿ ಅಲಿಯಾಳ ಬಾಲ್ಯ ತುಂಟಾಟದ ಮುಜುಗರ ಸನ್ನಿವೇಶವೊಂದನ್ನು ಬಹಿರಂಗಗೊಳಿಸಿದರು.

ಒಮ್ಮೆ ಏನಾಯಿತು ಗೊತೆ..? ನಾನು ಅಲಿಯಾಳನ್ನು ಶಾಲೆಗೆ ಕರೆದೊಯ್ಡೆ. ಶಾಲೆ ಬಳಿ ಅಲಿಯಾ ನನಗೊಂದು ವಿಷಯ ತಿಳಿಸಿದಳು. ನಾನು ಅದನ್ನು ಕೇಳಿ ಇರಿಸುಮುರಿಸುಗೊಂಡೆ.

ನಾನು ಒಳ ಉಡುಪು ಧರಿಸಿಲ್ಲ. ಅದನ್ನು ಹಾಕಿಕೊಳ್ಳುವುದನ್ನು ಮರೆತೆ ಎಂದಳು. ನಾನು ಕೂಡಲೇ ಆಕೆಯನ್ನು ಮನೆಗೆ ವಾಪಸ್ ಕರೆತಂದೆ ಎಂದು ಸೋನಿ ವಿವರಿಸಿದಾಗ. ಅಲಿಯಾ ಜೋರಾಗಿ ನಕ್ಕಳು. ಈ ಸನ್ನಿವೇಶದ ಸುದ್ದಿ ಕೇಳಿ ಇಡೀ ಟಾಕ್ ಶೋ ನಗೆಗಡಲಲ್ಲಿ ತೇಲಿತು.

ಬಾಲ್ಯದಲ್ಲಿ ತುಂಬಾ ತುಂಟಿ ಮತ್ತು ಹಠಮಾರಿಯಾಗಿದ್ದ ಅಲಿಯಾ, ತನ್ನ ತಂದೆ ಮಹೇಶ್ ಭಟ್ ಅವರನ್ನು ತುಂಬಾ ನೆಚ್ಚಿಕೊಂಡಿದ್ದಳು. ಶೂಟಿಂಗ್ ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ ಎಂದು ಸೋನಿ ಹೇಳಿದರು.

ತನ್ನ ಬಾಲ್ಯದ ಮತ್ತು ಸಿನಿಮಾ ವೃತ್ತಿ ಬಗ್ಗೆ ಮಾತನಾಡಿದ ಅಲಿಯಾ, ನನಗೆ ಬಾಲ್ಯದಲ್ಲಿ ನನ್ನ ತಂದೆಯ ಕೆಲಸದ ಒತ್ತಡದ ಬಗ್ಗೆ ತಿಳಿದಿರಲಿಲ್ಲ. ನಂತರ ನಾನು ಚಿತ್ರರಂಗ ಪ್ರವೇಶಿಸಿದಾಗ ನನ್ನ ತಂದೆಯರ ಪರಿಶ್ರಮ ಮತ್ತು ಸಮಯದ ಮಹತ್ವ ಅರಿವಾಯಿತು. ಆಗಿನಿಂದ ಅವರ ಬಗ್ಗೆ ನನ್ನ ಗೌರವ ಮತ್ತು ಅಭಿಮಾನ ಹೆಚ್ಚಾಯಿತು ಎಂದು ವಿವರಿಸಿದಳು.

ಕಳೆದ ವರ್ಷ ತೆರೆಕಂಡ ರಾಝಿ ಸಿನಿಮಾದಲ್ಲಿ ಮನೋಜ್ಞ ಅಭಿನಯ ನೀಡಿ ಗಮನಸೆಳೆದ ಅಲಿಯಾ ಈ ವರ್ಷ ರಣವೀರ್ ಸಿಂಗ್ ಜೊತೆ ಗಲ್ಲಿ ಬಾಯ್ ಸಿನಿಮಾದಲ್ಲಿ ನಟಿಸಿ ಮತ್ತೊಂದು ಸೂಪರ್‍ಹಿಟ್ ನೀಡಿದ್ದಾಳೆ.

Facebook Comments