ಕೆಆರ್‌ಪುರದಲ್ಲಿ ಅನಾವರಣಗೊಳ್ಳಲಿದೆ ಸಿದ್ಧಗಂಗಾ ಶ್ರೀಗಳ 111 ಅಡಿ ಕಟೌಟ್

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಆರ್.ಪುರ, ಫೆ.20-ಸಿಲಿಕಾನ್ ಸಿಟಿ ಬೆಂಗಳೂರು ನಗರ ಇದೇ ಮೊದಲ ಬಾರಿಗೆ ಅತ್ಯದ್ಭುತವಾದ ಸಾಂಸ್ಕøತಿಕ ಉತ್ಸವಕ್ಕೆ ಸಾಕ್ಷಿಯಾಗಲಿದೆ. ಫೆಬ್ರವರಿ 24 ರಿಂದ ಮಾರ್ಚ್ 10 ರವರೆಗೆ ಕೆ.ಆರ್.ಪುರ ಉತ್ಸವ ಒಟ್ಟು 15 ದಿನಗಳ ಕಾಲ ನಡೆಯಲಿದೆ. ಸಮಾಜ ಸೇವಕರಾದ ಕೆ.ಎನ್.ಪ್ರಕಾಶ್ ಅಧ್ಯಕ್ಷತೆಯ ವಲ್ರ್ಡ್ ಹೆಲ್ತ್ ಅಂಡ್ ಪಾವರ್ಟಿ ಟ್ರಸ್ಟ್ ನೇತೃತ್ವದಲ್ಲಿ ವೀರ್‍ಗ್ರೂಪ್ ಸಂಸ್ಥೆಯ ಉಸ್ತುವಾರಿಯಲ್ಲಿ ನಡೆಯುತ್ತಿದೆ.

ಈ ಉತ ್ಸವದ ಹಿಂದಿನ ಉದ್ದೇಶ ಸಮಾಜಸೇವೆಯಾಗಿದ್ದು, ಇದರಿಂದ ಸಂಗ್ರಹವಾಗುವ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ಗುದ್ದಲಿ ಪೂಜೆಯ ನಂತರ ಉತ್ಸವದ ಬಗ್ಗೆ ವಲ್ರ್ಡ್ ಹೆಲ್ತ್ ಅಂಡ್ ಪಾವರ್ಟಿ ಟ್ರಸ್ಟ್‍ನ ಅಧ್ಯಕ್ಷ ಕೆ.ಎನ್.ಪ್ರಕಾಶ್ ತಿಳಿಸಿದರು.

ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಬೃಹತ್ ಕಟೌಟ್‍ಗೆ ಹೈಡ್ರಾಲಿಕ್ ಕ್ರೇನ್ ಮೂಲಕ ಪುಷ್ಪಾರ್ಚನೆ ನಡೆಸಲಾಗುತ್ತದೆ. ಮನೋರಂಜನೆಯ ಜೊತೆ ಮಾನವತೆಯ ಸಾರ್ಥಕತೆ ಎಂಬ ಟ್ಯಾಗ್‍ಲೈನ್‍ನೊಂದಿಗೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ಪ್ರಮುಖವಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ ಗ್ರಾಮ ದತ್ತು ತೆಗೆದುಕೊಳ್ಳುವ ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.

ಈ ಗ್ರಾಮದಲ್ಲಿ ತುಂಡುಬಟ್ಟೆಗಳಲ್ಲಿ ಹೆಣೆದ ಜೋಪಡಿಗಳಲ್ಲಿ 180 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಕಿಂದರಿಜೋಗಿ ಎಂದು ಕರೆಯಲ್ಪಡುವ ಈ ಜನಾಂಗ ಮೂಲತಃ ಜಾನಪದ ಕಲಾವಿದರನ್ನು ಹೊಂದಿದೆ.

ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಕುಟುಂಬಗಳಿವು. ಅಗತ್ಯ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿಗೆ ಕುಡಿಯುವ ನೀರು, ವಿದ್ಯುತ್, ಮಕ್ಕಳಿಗೆ ಶಿಕ್ಷಣ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ನಿರ್ಧಾರ ಮಾಡಿದ್ದೇವೆ ಎಂದರು.

ಇದಲ್ಲದೇ, ತ್ರಿವಿಧ ದಾಸೋಹಿ ಶ್ರೀ ಸಿದ್ದಗಂಗಾ ಸ್ವಾಮೀಜಿಯವರ 111 ಅಡಿ ಎತ್ತರದ ಕಟೌಟ್‍ಗೆ ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ ಮತ್ತು ಸಿದ ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡುತ್ತಿರುವ 111 ವಿದ್ಯಾರ್ಥಿಗಳ ಶೈಕ್ಷಣಿಕ ಖರ್ಚು ಮತ್ತು ಅವರ ಇತರೆ ಖರ್ಚುಗಳನ್ನು ವೀರ್ ಗ್ರೂಪ್ ಭರಿಸಲಿದೆ ಎಂದು ತಿಳಿಸಿದರು.

ಈ ಸಾಂಸ್ಕøತಿಕ ಉತ್ಸವದ ಪ್ರಮುಖ ಆಕರ್ಷಣೆಯೆಂದರೆ ಸಿನಿಮಾ ರಂಗದ ದಿಗ್ಗಜ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸಂಗೀತ ಮಾಂತ್ರಿಕ ಹಂಸಲೇಖ ಅವರು 32 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಫೆಬ್ರವರಿ 24 ರಂದು ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ. ರವಿಹಂಸ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಇಬ್ಬರೂ ಸಂಗೀತ ರಸಸಂಜೆಯನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಅವರು, ವಲ್ರ್ಡ್ ಹೆಲ್ತ್ ಅಂಡ್ ಪಾವರ್ಟಿ ಟ್ರಸ್ಟ್ ಮತ್ತು ವೀರ್ ಗ್ರೂಪ್ ಸಂಸ್ಥೆಗಳು ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿರುವುದು ಸ್ತುತ್ಯಾರ್ಹವಾಗಿದೆ. ನಮ್ಮ ಸಿದ್ದಗಂಗಾ ಮಠದ 111 ಮಕ್ಕಳ ವಿದ್ಯಾಭ್ಯಾಸದ ಎಲ್ಲಾ ಖರ್ಚುಗಳನ್ನು ಈ ಸಂಸ್ಥೆಗಳೇ ವಹಿಸಿಕೊಳ್ಳುತ್ತಿರುವುದು ಆದರ್ಶಪ್ರಾಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮಗಳ ವಿವರ:
ಫೆಬ್ರವರಿ 25 ರಂದು ಸಂಜೆ 6 ಗಂಟೆಗೆ ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ನಟನೆಯ ಚಿತ್ರಗಳ ಹಾಡುಗಳ ನೃತ್ಯ ಇರಲಿದೆ. 26 ರಂದು ಸಂಜೆ 6 ಗಂಟೆಗೆ ಕಾಮಿಡಿ ಕಲಿಗಳು ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ಶಿವಕುಮಾರ್ ನೇತೃತ್ವದ ಕಾಮಿಡಿ ಕಿಲಾಡಿಗಳ ತಂಡ ಇಡೀ ರಾತ್ರಿ ನಗೆಬುಗ್ಗೆಯನ್ನು ಉಕ್ಕಿಸಲಿದೆ.

ಫೆ.27 ರಂದು ಸಂಜೆ 6 ಕ್ಕೆ ಸಂಗೀತ ರಸಸಂಜೆ, 28 ರಂದು ಸಂಜೆ 6 ಗಂಟೆಗೆ ದೇಸೀ ಬೀಟ್ಸ್ ಸಾಂಸ್ಕøತಿಕ ಕಾರ್ಯಕ್ರಮ, ಮಾರ್ಚ್ 1 ರಂದು ಸಂಜೆ 6 ಕ್ಕೆ ನಗೆ ನಗಾರಿ, ಮಾರ್ಚ್ 2 ರಂದು ಸಂಜೆ 6 ಗಂಟೆಗೆ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರು ನನ್ನ ಹಾಡು ನನ್ನದು ಕಾರ್ಯಕ ್ರಮ ನಡೆಸಿಕೊಡಲಿದ್ದಾರೆ.

ಮಾರ್ಚ್ 3 ರಂದು ಸಂಜೆ ಕನ್ನಡ ರ್ಯಾಪರ್ ಚಂದನ್‍ಶೆಟ್ಟಿ ಅವರಿಂದ ಕಾರ್ಯಕ್ರಮ, ಮಾರ್ಚ್ 4 ರಂದು ಸಂಜೆ ನೆಲಸೊಗಡು ಶಿವ ಜನಪದ ಕಾರ್ಯಕ್ರಮ, ಮಾರ್ಚ್ 5 ರಂದು ಪ್ರಾಣೇಶ್ ನೇತೃತ್ವದ ತಂಡದಿಂದ ನಗೆಹಬ್ಬ, 6 ರಂದು ಸಂಜೆ ಸಮರ ಕಲಾ ಪ್ರದರ್ಶನ, 7 ರಂದು ಸಂಜೆ ಸಂಗೀತ ಕಾರ್ಯಕ್ರಮ, 8 ರಂದು ಸಂಜೆ ಮಹಿಳಾ ಕಲಾವಿದರಿಂದ ಸಾಂಸ್ಕøತಿಕ ಸಮಾರಂಭ, 9 ರಂದು ಸಂಜೆ ಗಾಯಕ ವಿಜಯಪ್ರಕಾಶ್ ಅವರಿಂದ ನಾನೇ ರಾಜಕುಮಾರ ಕಾರ್ಯಕ್ರಮ , 10 ರಂದು ಸಂಜೆ 6 ಗಂಟೆಗೆ ಅರ್ಜುನ್ ಜನ್ಯ ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.  ಹೆಚ್ಚಿನ ಮಾಹಿತಿಗಾಗಿ 9663294363 ಸಂಪರ್ಕಿಸಬಹುದಾಗಿದೆ.

Facebook Comments