ಅಮೆರಿಕದಿಂದ ಭಾರತಕ್ಕೆ ಬಹುಪಯೋಗಿ ಎಫ್-21 ಹೊಸ ಯುದ್ಧ ವಿಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.20-ಅಮೆರಿಕ ಪ್ರತಿಷ್ಠಿತ ಲಾಕ್‍ಹೀಡ್ ಮಾರ್ಟಿನ್ ಸಂಸ್ಥೆಯೂ ಭಾರತಕ್ಕಾಗಿ ಬಹುಪಯೋಗಿ ಎಫ್-21 ಹೊಸ ಯುದ್ಧ ವಿಮಾನವನ್ನು ಇಂದು ಅನಾವರಣಗೊಳಿಸಿತು.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ ಆರಂಭವಾಗಿರುವ 5ದಿನಗಳ 12ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಅಮೆರಿಕದ ಈ ಸಂಸ್ಥೆ ಭಾರತೀಯ ವಾಯುಪಡೆಗಾಗಿ ಎಫ್-21 ಫೈಟರ್‍ಜಟ್ ಅನ್ನು ಪ್ರದರ್ಶಿಸಿತು.

ಅಮೆರಿಕಾ ತಂತ್ರಜ್ಞಾನದೊಂದಿಗೆ ಸ್ಥಳೀಯವಾಗಿ ಈ ವಿಮಾನಗಳನ್ನು ತಯಾರಿಸಲಾಗುತ್ತದೆ. ಇದು ಶತಕೋಟಿ ಡಾಲರ್ ವ್ಯವಹಾರವಾಗಿದೆ.
ಭಾರತದ ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ಇದು ಸಹ ಕಾರ್ಯರೂಪಕ್ಕೆ ಬರಲಿದೆ.

ಲಾಕ್‍ಹೀಡ್ ಮಾರ್ಟಿನ್ ಮತ್ತು ಟಾಟಾ ಅಡ್ವಾನ್ಸ್‍ಡ್ ಸಿಸ್ಟಮ್ಸ್ ಜಂಟಿಯಾಗಿ ಭಾರತದಲ್ಲಿ ಎಫ್-21ವಿಮಾನಗಳನ್ನು ಪೂರೈಸಲಿದೆ. ಇದೇ ಸಂಸ್ಥೆ ಇಂದೇ ಭಾರತಕ್ಕೆ ಎಫ್-16 ಸಮರ ವಿಮಾನಗಳನ್ನು ಪೂರೈಸಿತ್ತು.

ಹೊಸ ಎಫ್-21ಯುದ್ಧ ವಿಮಾನಗಳು ಅತ್ಯಧುನಿಕ ಸಾಮಥ್ರ್ಯ ಹೊಂದಿದ್ದು ಐಎಎಫ್‍ಕೆ ಶಸ್ತ್ರಸ್ತ್ರಾಗಳ ಬತ್ತಳಿಕೆಗಳ ಹೊಸ ಅಸ್ತ್ರವಾಗಲಿದೆ.

Facebook Comments