ಸುಳ್ಳು ಭರವಸೆಗಳ ಭಾಷಣವೇ ಮೋದಿ ಕೊಡುಗೆ : ಮೊಯ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

ಬಾಗೇಪಲ್ಲಿ, ಫೆ.20- ಪ್ರಧಾನಿ ನರೇಂದ್ರ ಮೋಧಿ ಅವರು ಬರಿ ಸುಳ್ಳು ಭರವಸೆಗಳನ್ನು ನೀಡುತ್ತಲೇ ಬಂದಿದ್ದಾರೆ. ಅವರಿಗೆ ರೈತರ ಕಷ್ಟಗಳು ಅರ್ಥವಾಗುವುದಿಲ್ಲ. ಅವರ ಕೊಡುಗೆ ಸುಳ್ಳು ಭರವಸೆಗಳ ಭಾಷಣ ಎಂದು ಸಂಸದ ಡಾ.ಎಂ.ವೀರಪ್ಪಮೊಯ್ಲಿ ಕಿಡಿಕಾರಿದ್ದಾರೆ.

ತಾಲೂಕಿನ ಗೊರ್ತಪಲ್ಲಿ ಗ್ರಾಮದಲ್ಲಿ ಅಯೋಜಿಸಲಾಗಿದ್ದ ವಿವಿಧ ಅಭಿವೃದ್ದಿ ಕಾಮಗಾರಿಗಳ ಗುದ್ದಲಿಪೂಜೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಡಳಿದಲ್ಲಿರುವ ರಾಜ್ಯಗಳಲ್ಲಿ ಮಾತ್ರ ರೈತರ ಸಾಲಮನ್ನಾ ಮಾಡಲಾಗಿದೆ. ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ರೈತರ ಸಾಲ ಮನ್ನಾಮಾಡಿದ್ದರೆ ತಿಳಿಸಿ.

ಇದೇ ಪರಿಸ್ಥಿತಿ ಕೇಂದ್ರದ ಬಿಜೆಪಿ ಸರ್ಕಾರ ಅನುಸರಿಸಿ ರೈತರಿಗೆ ಅನ್ಯಾಯ ಮಾಡಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ ಒಂದು ಯೋಜನೆಯೂ ಕಳೆದ 5 ವರ್ಷಗಳಲ್ಲಿ ಅನುಷ್ಠಾನಗೊಂಡಿಲ್ಲ, ಮೋದಿ ಒಬ್ಬ ಸುಳ್ಳು ಬಾಷಣಕಾರ. ಈ ದೇಶಕ್ಕೆ ಏನಾದರೂ ಕೊಡುಗೆ ನೀಡಿದ್ದರೆ ಸುಳ್ಳು ಭರವಸೆಗಳ ಭಾಷಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಂಧ್ರದ ಗಡಿ ಭಾಗದಲ್ಲಿ ಬಹಳ ಶ್ರಮದ ಜೀವನ ನಡೆಸುತ್ತಿರುವ ಈ ಕ್ಷೇತ್ರದ ಜನತೆಗೆ ಶಾಶ್ವತ ನೀರಾವರಿ ಯೋಜನೆ ಮೂಲಕ ಕೃಷಿ ಮತ್ತು ಕುಡಿಯಲು ಶುದ್ದ ನೀರನ್ನು ಓದಗಿಸಿ ಯೋಜನೆಯನ್ನು ಅನುಷ್ಠಾನಗೊಳಿಸಿ ಅಸಾಧ್ಯವಾದದ್ದನ್ನು ಸಾಧ್ಯಮಾಡಿ ತೋರಿಸುತ್ತೇನೆ, ಕೃಷ್ಣ ಜಲಭಾಗ್ಯ ನಿಗಮವನ್ನು ಸ್ಥಾಪಿಸಿ 80 ಟಿಎಂಸಿ ನೀರು ಶೇಖರಣೆ ಮಾಡಿ 80 ಲಕ್ಷ ಎಕರೆ ಜಮೀನಿಗೆ ನೀರು ಕೊಟ್ಟೆ, ಹೇಮಾವತಿ ನೀರನ್ನು ಹಾಸನ ಇತರೆ ನಾಲ್ಕು ಜಿಲ್ಲೆಗಳಿಗೆ ನೀರುನ್ನು ಹಾಗೂ ಘಟಪ್ರಭಾ ನದಿಯ ನೀರನ್ನು ಭಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳಿಗೆ ಹರಿಸಿ ಅಸಾಧ್ಯವಾದದ್ದುನ್ನು ಸಾಧ್ಯವಾಗುತ್ತೆ ಎಂದು ನಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ತೋರಿಸಿಕೊಟ್ಟಿದ್ದೇನೆ.

ಅದೇ ರೀತಿ ಗಡಿಭಾಗದ ಜನರಿಗೆ ಎತ್ತಿನಹೊಳೆ ಯೋಜನೆಯ ನೀರನ್ನು ಈ ಭಾಗಕ್ಕೆ 2 ವರ್ಷದೊಳಗೆ ಹರಿಸುತ್ತೇನೆ ಎಂದರು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ , ಜಿಪಂ ಸದಸ್ಯ ಲಕ್ಷ್ಮೀನರಸಿಂಹಪ್ಪ, ತಾಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್‍ಬಾಬು, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಲ್.ಶಂಕರರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ನರೇಂದ್ರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸರಸ್ವತಿ ರಮೇಶ್, ಉಪಾಧ್ಯಕ್ಷ ಜಿ.ಎಸ್.ನರಸಿಂಹಪ್ಪಹಾಗೂ ಮುಖಂಡರು ಹಾಜರಿದ್ದರು.

Facebook Comments