ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ : ಪಿಎನ್‍ಬಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾಲಿ ಇರುವ 325 ಅಧಿಕಾರಿ (ಐಟಿ), ಹಿರಿಯ ಮ್ಯಾನೇಜರ್ (ಕ್ರೆಡಿಟ್) ಮತ್ತು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಯು 2019 ರ ಫೆಬ್ರವರಿ 14 ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿದ್ದು. 2019 ರ ಮಾರ್ಚ್ 02 ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ / ಕಂಪ್ಯೂಟರ್ ಸೈನ್ಸ್ & ಟೆಕ್ನಾಲಜಿ / ಮಾಹಿತಿ ತಂತ್ರಜ್ಞಾನದಲ್ಲಿ ಎಂಸಿಎ / ಬಿ.ಇ. / ಬಿ.ಟೆಕ್ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಹಾಗೂ

ಹಿರಿಯ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಸಿ.ಎ. / ಐಸಿಡಬ್ಲ್ಯೂಎ / ಎಮ್ಬಿಎ ಅಥವಾ ಪಿಜಿಡಿಎಂ (ಫೈನಾನ್ಸ್ನಲ್ಲಿ ವಿಶೇಷತೆ) ಅಥವಾ ಯಾವುದೇ ಎಐಸಿಟಿಇ ಅನುಮೋದನೆ ಪಡೆದ ಇನ್ಸ್ಟಿಟ್ಯೂಟ್ನಿಂದ ಡಿಪ್ಲೊಮಾಕ್ಕೆ ಸಮಾನ ಪದವಿ ವಿದ್ಯಾರ್ಹತೆ ಹೊಂದಿರಬೇಕು.

2019 ರ ಜನವರಿ 01 ರಂತೆ 35 ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇನ್ನು ಅರ್ಜಿ ಶುಲ್ಕ ಎಸ್ಸಿ / ಎಸ್ಟಿ / ಮಹಿಳಾ / ಪಿಡಬ್ಲ್ಯೂಡಿ ಅರ್ಜಿದಾರರಿಗೆ 100 ಶುಲ್ಕ /-. ಇತರೆ ಅಭ್ಯರ್ಥಿಗಳಿಗೆ ರೂ. 600 / – ನಿಗದಿಪಡಿಸಲಾಗಿದೆ.

ಆಯ್ಕೆ ಆನ್ಲೈನ್ ಪರೀಕ್ಷೆ ಮತ್ತು ಇಂಟರ್ವ್ಯೂ.ಆಧರಾದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.  ಹೆಚ್ಚಿನ ಮಾಹಿತಿಗಾಗಿ  ಈ ಮುಂದಿನ ಲಿಂಕ್  ಗೆ ಭೇಟಿನೀಡಿ : https://bit.ly/2BkaRhH

Facebook Comments