ಅರಿಶಿಣದಿಂದಲೂ ಅಡ್ಡಪರಿಣಾಮಗಳಿವೆ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಅರಿಶಿನವು ಭಾರತೀಯರು ದಿನ ನಿತ್ಯ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಇದರಿಂದ ಹಲವಾರು ಆರೋಗ್ಯಕರವಾದ ಪ್ರಯೋಜನಗಳು ದೊರೆಯುವುದು ನಿಜವಾದರು, ಇದರಿಂದಲೂ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂಬುದು ಅಷ್ಟೇ ನಿಜ. ನಮಗೆ ಇದುವರೆಗೂ ತಿಳಿದಿರುವಂತೆ ಅರಿಶಿನ ಬಳಸುವುದರಿಂದ ಉರಿಯೂತವನ್ನು ತಡೆಯಬಹುದು. ಕೆಲವೊಂದು ಸಂದರ್ಭದಲ್ಲಿ ಅರಿಶಿನವನ್ನು ಗಾಯಗಳಿಗೆ ಮದ್ದಾಗಿ ಸಹ ಬಳಸುತ್ತಾರೆ.

ಆದರೆ, ಇಂದು ತಜ್ಞರು ಒಂದು ತೀರ್ಮಾನಕ್ಕೆ ಬಂದಿದ್ದಾರೆ, ಅದೇನಪ್ಪ ಎಂದರೆ- ಅರಿಶಿನವು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಅರಿಶಿನವನ್ನು ಪ್ರತಿಯೊಂದು ಆಹಾರಕ್ಕೆ ಬಳಸುವುದರಿಂದ ನೀವು ನಿಬ್ಬೆರಗಾಗುವಂತಹ ರೋಗರುಜಿನಗಳಿಗೆ ಒಳಗಾಗುವಿರಿ ಎಂಬುದು ಅವರ ಮಾತು.

ಅಧ್ಯಯನಗಳ ಪ್ರಕಾರ, ಅರಿಶಿನವನ್ನು ಅಧಿಕ ಪ್ರಮಾಣದಲ್ಲಿ ಬಳಸುವುದರಿಂದ ಚರ್ಮದಲ್ಲಿ ತುರಿಕೆ ಮತ್ತು ಒಣ ಚರ್ಮದ ಸಮಸ್ಯೆಯು ಕಂಡು ಬರುತ್ತದೆ. ಜೊತೆಗೆ ಇದು ಜಠರದಲ್ಲಿ ಗೋಡೆಗಳನ್ನು ಸಹ ಹಾನಿ ಮಾಡುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯು ಸಹ ಮುಂದಿನ ದಿನಗಳಲ್ಲಿ ಕಂಡು ಬರಬಹುದು.

ಚಳಿಗಾಲದಲ್ಲಿ ಅರಿಶಿನವನ್ನು ಹೆಚ್ಚು ಬಳಸುತ್ತಾರೆ. ಆದರೆ ಬಿಸಿಲು ಇರುವಾಗ ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತತ್ತದೆ. ಹಾಗಾಗಿ ಬಳಸಿದ್ದರೆ ಒಳ್ಳೆಯದು.   ಹಳದಿ ರೋಗ ಬಂದರೆ, ಕಿಡ್ನಿ ಸ್ಟೋನ್ ಆದಾಗ ಅರಿಶಿನವನ್ನು ಸೇವಿಸಬಾರದು. ರಕ್ತ ಹೀನತೆ ಅಥವಾ ರಕ್ತಸ್ರಾವ ಸಮಸ್ಯೆ ಇದ್ದವರು ಅರಿಶಿನವನ್ನು ಕಡಿಮೆ ಬಳಸಬೇಕು.

ಸಕ್ಕರೆ ಕಾಯಿಲೆ ಇರುವವರಿಗೂ ಅರಿಶಿನ ಮದ್ದಾಗುವುದಿಲ್ಲ.  ಗರ್ಭಿಣಿಯರು ಅರಿಶಿನದ ಸೇವಿಸುವುದು ಕಡಿಮೆ ಮಾಡಬೇಕು.
ಅಧಿಕ ಸೇವಿಸಿದರೆ ಹೊಟ್ಟೆಯಲ್ಲಿ ಉಷ್ಣ ಹೆಚ್ಚುತ್ತದೆ, ತಲೆ ತಿರುಗುವುದು ಮೊದಲಾದ ಸಮಸ್ಯೆಗಳಿಗೂ ಎಡೆ ಮಾಡಿಕೊಡುತ್ತದೆ.

ಅರಿಶಿನ ಸೇವಿಸಿದ್ದಲ್ಲಿ ಕ್ಯಾನ್ಸರ್‌ಕಾಯಿಲೆ ಬಾರದಂತೆ ತಡೆಯಬಹುದು ಎನ್ನುವ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ, ಅದೇ ಅರಿಶಿನ ಪುಡಿಯಲ್ಲಿ ಕ್ಯಾನ್ಸರ್‌ಕಾಯಿಲೆಗೆ ಬರುವ ರಾಸಾಯನಿಕ ಪದಾರ್ಥಗಳನ್ನು ಸೇರಿಸಿ ಮಾರಾಟ ಮಾಡಲಾಗುತ್ತಿರುವ ಅಘಾತಕಾರಿ ವಿಷಯ ಸಂಶೋಧನೆಯಿಂದ ಬಹಿರಂಗವಾಗಿದೆ.

Facebook Comments