ಸೋಷಿಯಲ್ ಮೀಡಿಯಾದಲ್ಲಿ ಚುನಾವಣಾ ಪ್ರಚಾರ ಹೊಣೆ ಕೇಂದ್ರ ಬಿಜೆಪಿ ನಾಯಕರ ಹೆಗಲಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.21-ಭಾರತೀಯ ಜನತಾ ಪಕ್ಷ ಹೆಚ್ಚು ರಾಷ್ಟ್ರಮಟ್ಟದಲ್ಲೇ ಕೇಂದ್ರೀಕೃತವಾಗುತ್ತಿದೆ ಎಂಬ ಆರೋಪಗಳ ಮಧ್ಯೆಯೇ ರಾಜ್ಯಗಳ ಸಾಮಾಜಿಕ ಮಾಧ್ಯಮಗಳ ಹೊಣೆಗಾರಿಕೆಯನ್ನು ಅಮಿತ್ ಷಾ ಕೇಂದ್ರ ನಾಯಕರಿಗೆ ನೀಡಿದ್ದಾರೆ.

ಪ್ರತಿ ರಾಜ್ಯದ ಸೋಷಿಯಲ್ ಮೀಡಿಯಾ ಘಟಕಗಳ ಕಾರ್ಯಕ್ರಮಗಳನ್ನು ಕೇಂದ್ರ ತಂಡ ನಿರ್ವಹಿಸಲಿದೆ. ಪ್ರಧಾನ ಮಂತ್ರಿ ಮೋದಿ ಪಾಲ್ಗೊಳ್ಳುವ ಪ್ರತಿ ರ್ಯಾಲಿಯ ವಿಡಿಯೋಗಳನ್ನು ಸ್ಥಳೀಯ ಭಾಷೆಯಲ್ಲೇ ವಾಯ್ಸ್ ರೆಕಾರ್ಡಿಂಗ್ ಮಾಡಿ ಹಾಗೂ ಎಡಿಟ್ ಮಾಡಿ ಆಯಾ ರಾಜ್ಯ ಘಟಕಗಳಿಗೆ ಕಳುಹಿಸಲಾಗುತ್ತದೆ.

ಆ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡುವುದು ಕೆಲಸ ಮಾತ್ರ ಆಯಾ ರಾಜ್ಯಗಳ ಸೋಷಿಯಲ್ ಮೀಡಿಯಾ ಘಟಕದ ಕೆಲಸವಾಗಿದೆ ಎಂದು ಕರ್ನಾಟಕ ಸಾಮಾಜಿಕ ಘಟಕ ತಿಳಿಸಿದೆ.

ಪ್ರತಿಯೊಂದು ರಾಜ್ಯಗಳ ಟ್ವಿಟ್ಟರ್ ಅಕೌಂಟ್ ಚೆಕ್ ಮಾಡಿ ಬೇರೆ ರಾಜ್ಯಗಳೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಅತಿ ಕಡಿಮೆ ಹಾಗೂ ಹೆಚ್ಚಿನ ಕಾರ್ಯಕ್ಷಮತೆ ತೋರುವ ರಾಜ್ಯಗಳಿಗೆ ಕೇಂದ್ರ ಅಭಿನಂದನೆ ಸಲ್ಲಿಸಲಿದೆ.

Facebook Comments

Sri Raghav

Admin