ಬಜೆಟ್ ಮೇಲಿನ ಚರ್ಚೆಗೆ ಜೆಡಿಎಸ್ ಗೈರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.21- ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಕೇವಲ 14 ಸದಸ್ಯರಿರುವ ಜೆಡಿಎಸ್‍ನವರಿಗೆ ಬಂಪರ್ ಅನುದಾನ ಘೋಷಣೆಯಾಗಿದೆ. 14 ಸದಸ್ಯರು ಹಾಗೂ ಮಹಾಲಕ್ಷ್ಮಿ ಬಡಾವಣೆಗೆ ಸುಮಾರು 350 ಕೋಟಿ ಅನುದಾನ ಸಿಕ್ಕಿದೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಜೆಡಿಎಸ್‍ನ ಯಾವೊಬ್ಬ ಸದಸ್ಯರೂ ಪಾಲ್ಗೊಳ್ಳದಿರುವುದು ವಿಪರ್ಯಾಸವೇ ಸರಿ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾಗೋಪಾಲಯ್ಯ ಅವರು ಮೇಲ್ಭಾಗದಲ್ಲಿ ಆಯುಕ್ತರ ಪಕ್ಕದ ಸೀಟಿನಲ್ಲಿ ಕುಳಿತಿದ್ದರೆ, ಉಪಮೇಯರ್ ಭದ್ರೇಗೌಡರು ಮೇಯರ್ ಗಂಗಾಂಬಿಕೆ ಪಕ್ಕದ ಆಸನದಲ್ಲಿ ಕುಳಿತಿದ್ದರು. ಜೆಡಿಎಸ್ ಗುಂಪಿನ ನಾಯಕಿ ನೇತ್ರಾನಾರಾಯಣ್ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಲಿ, ಆ ಪಕ್ಷದ ಸದಸ್ಯರಾಗಲಿ ಅವರವರ ಆಸನಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

ಒಟ್ಟಾರೆ ಬಂಪರ್ ಅನುದಾನ ಸಿಕ್ಕಿದರೂ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಳ್ಳಲು ಜೆಡಿಎಸ್‍ನವರು ನಿರಾಸಕ್ತಿ ತೋರಿದ್ದು ಏಕೆಂದು ತಿಳಿಯದು.

Facebook Comments