ಸಿಕ್ಸ್ ಗಳ ದಾಖಲೆ ಬರೆದ ಕ್ರಿಸ್‍ಗೇಲ್

ಈ ಸುದ್ದಿಯನ್ನು ಶೇರ್ ಮಾಡಿ

ಬ್ರಿಡ್ಜ್‍ಟೌನ್, ಫೆ.21- ಕೆರಿಬಿಯನ್ ದೈತ್ಯ ಕ್ರಿಸ್‍ಗೇಲ್ 2019ರ ವಿಶ್ವಕಪ್ ನಂತರ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿರುವ ಬೆನ್ನಲ್ಲೇ ನೂತನ ವಿಶ್ವದಾಖಲೆಯನ್ನು ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 12 ಸಿಕ್ಸರ್‍ಗಳನ್ನು ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಪಾಕಿಸ್ತಾನದ ಸೈಯದ್ ಆಫ್ರಿದಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ (476, 524 ಪಂದ್ಯ) ಆಟಗಾರನೆಂದು ಇದುವರೆವಿಗೂ ಬಿಂಬಿಸಿಕೊಂಡಿದ್ದರು. ಈಗ ಆ ದಾಖಲೆಯನ್ನು ಕ್ರಿಸ್‍ಗೇಲ್ ಮುರಿದಿದ್ದಾರೆ.

ಕ್ರಿಸ್‍ಗೇಲ್ 444 ಅಂತಾರಾಷ್ಟ್ರೀಯ ಪಂದ್ಯಗಳ ಮೂಲಕ 477 ಸಿಕ್ಸರ್‍ಗಳನ್ನು ಸಿಡಿಸಿದ್ದಾರೆ. ಏಕದಿನ ಮಾದರಿಯಲ್ಲಿ 276 ಸಿಕ್ಸರ್, ಟೆಸ್ಟ್ ಪಂದ್ಯಗಳಲ್ಲಿ 98 ಹಾಗೂ ಚುಟುಕು ಮಾದರಿಯಲ್ಲಿ 103 ಸಿಕ್ಸರ್‍ಗಳನ್ನು ಬಾರಿಸಿದ್ದಾರೆ.

ವೆಸ್ಟ್ ಇಂಡೀಸ್ ತಂಡದ ಪರ ಏಕದಿನ ಮಾದರಿಯಲ್ಲಿ ಲಾರಾ (10,405) ನಂತರ 9,727 ರನ್‍ಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಗುರುತಿಸಿಕೊಂಡಿರುವ ಗೇಲ್, 2015ರ ವಿಶ್ವಕಪ್‍ನಲ್ಲಿ 215 ರನ್ ಗಳಿಸಿರುವುದು ಗರಿಷ್ಠ ರನ್ ಎಂದು ಗುರುತಿಸಿಕೊಂಡಿದೆ.

ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರು: ಬ್ರೆಡಂ ಮೆಕುಲುಂ- ನ್ಯೂಜಿಲೆಂಡ್- 398 ಸಿಕ್ಸರ್,  ಸನತ್ ಜಯಸೂರ್ಯ- ಶ್ರೀಲಂಕಾ- 352 ಸಿಕ್ಸರ್
ರೋಹಿತ್‍ಶರ್ಮಾ- ಭಾರತ- 349 ಸಿಕ್ಸರ್.

Facebook Comments