ಉದ್ಯೋಗಸ್ಥರಿಗೆ ಮೋದಿ ಸರ್ಕಾರದಿಂದ ಸಿಹಿಸುದ್ದಿ, ಇಪಿಎಫ್ ಬಡ್ಡಿ ದರ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ. ಫೆ. 21 : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಉದ್ಯೋಗಸ್ಥರಿಗೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿಯೊಂದು ಬಂದಿದೆ.

ದೇಶದಲ್ಲಿರುವ 6 ಕೋಟಿ ಉದ್ಯೋಗಸ್ಥರ ಇಪಿಎಫ್ ಬಡ್ಡಿ ದರವನ್ನು ಶೇ. 8.55ರಷ್ಟಿದ್ದ ಶೇ. 8.65ಕ್ಕೆ ಹೆಚ್ಚಳ ಮಾಡಲಾಗಿದೆ. ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಈ ವಿಷಯ ತಿಳಿಸಿದ್ದು, ಪಿಎಫ್ ಬಡ್ಡಿ ದರ ಹೆಚ್ಚಳಕ್ಕೆ ಸಮ್ಮತಿ ನೀಡಲಾಗಿದೆ ಎಂದಿದ್ದಾರೆ.

ಕಳೆದ ಸಾಲಿನಲ್ಲಿ ಪಿಎಫ್ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದ್ದು, ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚಳ ಮಾಡಲಾಗಿದೆ.  2018-19ರಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯ ಸಿಬಿಟಿ ಮಂಡಳಿಯು ಇಪಿಎಫ್ ಬಡ್ಡಿದರವನ್ನು ಶೇ. 8.55 ರಿಂದ ಶೇ. 8.65ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಿತ್ತು.

ಇದೀಗ ಹಣಕಾಸು ಸಚಿವಾಲಯ ಸಿಬಿಟಿಯ ಶಿಪಾರಸ್ಸನ್ನು ಅನುಮೋದಿಸಿದ್ದು, ಈ ನಿರ್ಧಾರದಿಂದ ಆರು ಕೋಟಿ ಗ್ರಾಹಕರಿಗೆ ಪ್ರಯೋಜನವಾಗಲಿದ್ದು, ಕೇಂದ್ರ ಸರ್ಕಾರಕ್ಕೆ ರೂ. 151 ಕೋಟಿ ಹೆಚ್ಚುವರಿ ಹೊರೆಯಾಗಲಿದೆ.  ಇಪಿಎಫ್ ಬಡ್ಡಿದರ 2016ರ ಬಳಿಕ ಇದೇ ಮೊದಲ ಬಾರಿಗೆ ಏರಿಕೆ ಮಾಡಲಾಗಿದೆ.

Facebook Comments

Sri Raghav

Admin