2 ತಲೆ ಹಾವು ಮಾರಾಟ ಯತ್ನ: ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಹುಣಸೂರು, ಫೆ.21- ನಾಗರಹೊಳೆ ಕಾಡಿನಿಂದ ತಂದ ಎರಡು ತಲೆ ಹಾವನ್ನು ಮಾರಾಟ ಮಾಡಲು ಯತ್ನಿಸಿದ ನಾಲ್ವರನ್ನು ಬಂಧಿಸಿರುವ ನಗರ ಠಾಣೆ ಪೊಲೀಸರು ಅವರಿಂದ ಗೂಡ್ಸ್ ವಾಹನ ಹಾಗೂ ದ್ವಿ ಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲೆ ಹೆಚ್‍ಡಿ ಕೋಟೆ ತಾಲೂಕಿನ ಟೈಗರ್ ಬ್ಲಾಕ್‍ನ ಅರವಿಂದ, ಕಾವೇರಪ್ಪ, ಸಿ.ಕೆ.ಸೋಮಯ್ಯ ಹಾಗೂ ಅಭಿಷೇಕ್ ಬಂಧಿತ ಆರೋಪಿಗಳು. ಅರವಿಂದ ಈ ಎರಡು ತಲೆಯ ಹಾವನ್ನು ನಾಗರಹೊಳೆಯ ವೀರನಹೊಸಹಳ್ಳಿ ಕಾಡಿನಿಂದ ತಂದು ಕೊಡಗಿನ ಅಭಿಷೇಕ್ ಎಂಬುವವರ ಮುಖಾಂತರ ಕಾವೇರಪ್ಪ ಹಾಗೂ ಸೋಮಯ್ಯ ಎಂಬುವರಿಗೆ 2 ಲಕ್ಷ ರೂ.ಗೆ ಮಾರಾಟ ಮಾಡಿ 1ಲಕ್ಷ ಮುಂಗಡ ಹಣ್ಣ ನೀಡಿದ್ದ ಇವರು ಕೇರಳದವರಿಗೆ ಮಾರಾಟ ಮಾಡಲು ಯತ್ನಿಸಿದ್ದರು.

ಇದರ ಬಗ್ಗೆ ನಿಖರ ಮಾಹಿತಿ ಕಲೆ ಹಾಕಿದ ಪಿಎಸ್‍ಐ ಮಹೇಶ ಹಾಗೂ ಸಿಬ್ಬಂದಿಗಳಾದ ಲೋಕೇಶ್, ಕಿರಣ್, ಜಗದೀಶ್, ಪ್ರಭಾಕರ್ ಹಾಗೂ ಮಹೇಶ್ ಭೇಟಿ ನೀಡಿ ಪರಶೀಲಿಸಿದಾಗ ಹಾವು ಮಾರಾಟ ಮಾಡಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಅರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Facebook Comments