ಯುಪಿಎಸ್‌ಸಿ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ಯೂನಿಯನ್ ಪಬ್ಲಿಕ್ ಸರ್ವಿಸ್ ಆಯೋಗದಲ್ಲಿ (ಯುಪಿಎಸ್‌ಸಿ) 986 ಐಎಎಸ್, ಐಎಫ್ಎಸ್ ಹುದ್ದೆಗಳನ್ನು ಭರ್ತಿ ಮಾಡಲು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಅಭ್ಯರ್ಥಿಯು ಅರ್ಜಿ ಸಲ್ಲಿಸಲು 2019 ರ ಫೆಬ್ರವರಿ 19 ಆರಂಭದ ದಿನಾಂಕವಾಗಿದ್ದು. 2019 ರ ಮಾರ್ಚ್ 18 ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಯೂನಿಯನ್ ಸಾರ್ವಜನಿಕ ಸೇವಾ ಆಯೋಗದಲ್ಲಿ ಖಾಲಿ ಇರುವ ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್), ಭಾರತೀಯ ಅರಣ್ಯ ಸೇವೆಗಳು(ಐಎಫ್ಎಸ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಬ್ಯಾಚುಲರ್ ಪದವಿ ಅಥವಾ ಸಮಾನತೆಯ ವಿದ್ಯಾರ್ಹತೆ ಹೊಂದಿರಬೇಕು.

ಅರ್ಜಿದಾರರ ವಯಸ್ಸಿನ ಮಿತಿ ಕನಿಷ್ಠ ವಯಸ್ಸು 21 ವರ್ಷ ದಿಂದ ಗರಿಷ್ಠ ವಯಸ್ಸು 32 ವರ್ಷಗಳು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇನ್ನು ಅರ್ಜಿ ಶುಲ್ಕ ಎಸ್ಸಿ / ಎಸ್ಟಿ / ಮಹಿಳಾ / ಪಿಡಬ್ಲ್ಯೂಡಿ ಅರ್ಜಿದಾರರಿಗೆ ಶುಲ್ಕ ವಿನಾಹಿತಿ /-. ಇತರೆ ಅಭ್ಯರ್ಥಿಗಳಿಗೆ ರೂ. 100 / – ನಿಗದಿಪಡಿಸಲಾಗಿದೆ.

ಆಯ್ಕೆ ಬರೆಯಲ್ಪಟ್ಟ ಪರೀಕ್ಷೆ, ಸಂದರ್ಶನ ಮತ್ತು ವ್ಯಕ್ತಿತ್ವ ಪರೀಕ್ಷೆಯ ಆಧರಾದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ  ಈ ಮುಂದಿನ ಲಿಂಕ್  ಗೆ ಭೇಟಿನೀಡಿ : https://bit.ly/2GELdsm

Facebook Comments