ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಅನ್ನಭಾಗ್ಯ ಅಕ್ಕಿ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಫೆ.22- ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಅನ್ನಭಾಗ್ಯ ಯೋಜನೆಯ 32 ಕ್ವಿಂಟಾಲ್ ಅಕ್ಕಿಯನ್ನು ತಹಸೀಲ್ದಾರ್ ಚಂದ್ರಮೌಳಿ ನೇತೃತ್ವದ ತಂಡ ವಶಪಡಿಸಿಕೊಂಡಿದೆ. ತಾಲ್ಲೂಕಿನ ಕಿರುಗಾವಲು ಗ್ರಾಮದ ಬಿ.ಎಸ್.ರೈಸ್‍ಮಿಲ್‍ನಲ್ಲಿ ಸಂಗ್ರಹಿಸಿದ್ದ ಅನ್ನ ಭಾಗ್ಯ ಯೋಜನೆಯ ಅಕ್ಕಿಯ ಬಗ್ಗೆ ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ ತಹಸೀಲ್ದಾರ್ 44 ಮೂಟೆ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಪಡಿತರ ಮತ್ತು ಆಹಾರ ಇಲಾಖೆಯ ನಿರೀಕ್ಷಕ ಕೃಷ್ಣಪ್ಪ ಹಾಗೂ ಕಿರುಗಾವಲು ರಾಜಸ್ವ ನಿರೀಕ್ಷಕ ಬಸವಲಿಂಗೇಗೌಡ , ಗ್ರಾಮ ಲೆಕ್ಕಿಗ ನಂದೀಶ್ ಹಾಗೂ ಕಿರುಗಾವಲು ಪೊಲೀಸ್ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments