ನೀವು ಪ್ರಭಾಕರ್ ರೆಡ್ಡಿಯಿಂದ ವಂಚನೆಗೊಳಗಾಗಿದ್ದರೆ ಸಿಸಿಬಿಗೆ ದೂರು ನೀಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.22- ರಿಯಲ್ ಎಸ್ಟೇಟ್ ಉದ್ಯಮಿ, ರಾಜಕಾರಣಿ ಪ್ರಭಾಕರ್ ರೆಡ್ಡಿ ಅವರಿಂದ ಯಾರಾದರೂ ವಂಚನೆ ಹಾಗೂ ಅನ್ಯಾಯಕ್ಕೆ ಒಳಗಾಗಿದ್ದರೆ ನೇರವಾಗಿ ಸಿಸಿಬಿಗೆ ಬಂದು ದೂರು ನೀಡಿ ಎಂದು ಸಿಸಿಬಿ ಡಿಸಿಪಿ ಗಿರೀಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಫ್ರಭಾಕರ್‍ರೆಡ್ಡಿ ಸೈಟು ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವುದು, ಒಂದೇ ಸೈಟನ್ನು ಇಬ್ಬರು, ಮೂವರಿಗೆ ಕೊಟ್ಟಿರುವುದು, ಕೆಲವರಿಗೆ ಹಣ ಹಿಂದಿರುಗಿಸದೆ ಇರುವ ಆರೋಪಗಳು ಇವರ ಮೇಲಿವೆ ಎಂದು ತಿಳಿಸಿದರು. ಪ್ರಭಾಕರ್ ರೆಡ್ಡಿ ವಿರುದ್ಧ ಸಿಸಿಬಿಗೆ ದೂರುಗಳ ಸುರಿಮಳೆ ಬರುತ್ತಿದೆ.

ಇದುವರೆಗೂ ರೆಡ್ಡಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 40 ಪ್ರಕರಣಗಳು ದಾಖಲಾಗಿದ್ದವು. ಅವರ ಬಂಧನದ ನಂತರ ಇದೀಗ ಹೆಚ್ಚಾಗಿ ದೂರುಗಳು ಬರುತ್ತಿವೆ ಎಂದು ಹೇಳಿದರು.

ನಿನ್ನೆ ಪ್ರಭಾಕರ್ ರೆಡ್ಡಿ ಬಂಧಿಸಿದ ನಂತರ ಇವರ ವಿರುದ್ಧ ಈತನಕ ಸಿಸಿಬಿಗೆ 25 ದೂರುಗಳು ಬಂದಿವೆ ಎಂದು ಅವರು ತಿಳಿಸಿದರು.

Facebook Comments