ಶಾಲೆಗೆ ನುಗ್ಗಿದ ಕಾರು, ಕೂದಲೆಳೆ ಅಂತರದಲ್ಲಿ ಪಾರಾದ ಬಾಲಕಿ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ. ಫೆ.೨೨ : ಕಾರು ಬೈಕ್ ಗೆ ಡಿಕ್ಕಿ‌ ಹೊಡೆದು ಖಾಸಗಿ ಶಾಲೆಯೊಳಗೆ ನುಗ್ಗಿರುವ ಘಟನೆ ರವೀಂದ್ರ ನಗರ ಬಡಾವಣೆಯಲ್ಲಿ ನಡೆದಿದೆ.  ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಶಾಲೆಯ ಪಕ್ಕದ ರಸ್ತೆಯಲ್ಲಿ ನಿಂತಿದ್ದ ಬಾಲಕಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ.

ಎಂ.ಜಿ.ರಸ್ತೆ ಪಕ್ಕದಲ್ಲಿರುವ ಯುರೋ ಕಿಡ್ಸ್ ಶಾಲೆ ಬಳಿ ಈ ಘಟನೆ ನಡೆದಿದೆ. ಸಂಜೆ ವೇಳೆಯಾದ್ದರಿಂದ ಜನ ದಟ್ಟಣೆ ಇಲ್ಲದ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ತಪ್ಪಿದೆ.

ಘಟನೆ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.   ಮಧ್ಯಾಹ್ನ ಶಾಲೆ ಮುಗಿದಿದ್ದರಿಂದ ಮನೆಗೆ ಎಲ್ಲಾ ಮಕ್ಕಳು ತೆರಳಿದ್ದರು ಎನ್ನಲಾಗಿದೆ.

ಇನ್ನು ಕಾರಿನ ವೇಗಕ್ಕೆ ಶಾಲೆಯ ತಡೆಗೋಡೆಯೇ ಜಕಂಗೊಂಡಿದೆ. ಘಟನಾ ಸ್ಥಳಕ್ಕೆ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Facebook Comments

Sri Raghav

Admin