ಕಾಶ್ಮೀರದ ಗುರೆಜ್‍ನಲ್ಲಿ ಭಾರೀ ಹಿಮಪಾತ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ,ಫೆ.22- ಜಮ್ಮುಕಾಶ್ಮೀರದ ಗುರೆಜ್ ವಲಯದಲ್ಲಿ ಇಂದು ಭಾರೀ ಹಿಮಪಾತವಾಗಿದ್ದು, ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಳೆದ ಗುರುವಾರ ತಡರಾತ್ರಿ ಕಂಡಿಯಾಲ ಎಂಬಲ್ಲಿ ಭಾರೀ ಗಾತ್ರದ ಮಂಜು ಗಡ್ಡೆಯೊಂದು ಕರಗಿತ್ತು. ಭಾರೀ ಹಿಮಪಾತದ ಪರಿಣಾಮ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.

ಒಟ್ಟಾರೆ ನಿನ್ನೆ ಮತ್ತು ಇಂದು ಸಂಭವಿಸಿದ ಹಿಮಪಾತದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ .ಆದರೆ ಕೆಲವು ಮನೆಗಳು ಜಖಂಗೊಂಡಿವೆ ಎಂದು ವರದಿಯಾಗಿದೆ.

Facebook Comments