ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಹೈದ್ರಾಬಾದ್, ಫೆ. 22- ಇತ್ತೀಚಿಗೆ ಬಂದ ಕನ್ನಡದ ನಾಗರಹಾವು ಚಿತ್ರ ಸೇರಿದಂತೆ 100 ಕ್ಕೂ ಹೆಚ್ಚು ತೆಲುಗು ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ನಿಧನರಾಗಿದ್ದಾರೆ.

ಅವರು ಉಸಿರಾಟದ ತೊಂದರೆಯಿಂದಾಗಿ ಹೈದ್ರಾಬಾದ್‍ನ ಗಚ್ಚಿಬೌಲ್‍ನ ಎಐಜಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ವರ್ಷಗಳ ಹಿಂದೆ ಹೃದಯಾಘಾತ, ಪಾರ್ಶ್ವವಾಯುವಿಗೆ ತುತ್ತಾಗಿದ್ದ ಕೋಡಿ ರಾಮಕೃಷ್ಣ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು.

ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಅಮ್ಮೋರು’, ‘ದೇವಿ’, ‘ದೇವಿ ಪುತ್ರುಡು’, ‘ಅಂಜಿ’, ‘ಅರುಂಧತಿ’ ಕನ್ನಡದ ‘ನಾಗರಹಾವು’ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು.

ಚಿರಂಜೀವಿ, ಅಕ್ಕಿನೇನಿ ನಾಗೇಶ್ವರರಾವ್, ನಾಗಾರ್ಜುನ, ನಂದಮೂರಿ ಬಾಲಕೃಷ್ಣ, ವಿಕ್ಟರಿ ವೆಂಕಟೇಶ್, ಅರ್ಜುನ್ ಸರ್ಜಾ, ಜಗಪತಿ ಬಾಬು ಸೇರಿದಂತೆ ಹಲವಾರು ಖ್ಯಾತ ನಟರ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ಅಲ್ಲದೇ, ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

80ರ ದಶಕದಲ್ಲಿ ಟಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಕೋಡಿರಾಮಕೃಷ್ಣ ಇದುವರೆಗೂ ಮಲಯಾಳಂ, ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

Facebook Comments