ಸಿಯೋಲ್‍ನಲ್ಲಿ ರಾಷ್ಟ್ರೀಯ ಸ್ಮಾರಕಕ್ಕೆ ಮೋದಿ ಭೇಟಿ, ಹುತಾತ್ಮರಿಗೆ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೋಲ್, ಫೆ.22- ದಕ್ಷಿಣ ಕೊರಿಯಾದಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ರಾಜಧಾನಿ ಸಿಯೋಲ್‍ನಲ್ಲಿರುವ ರಾಷ್ಟ್ರೀಯ ಸ್ಮಾರಕಕ್ಕೆ ಭೇಟಿ ನೀಡಿ, ಕೊರಿಯಾ ಯುದ್ಧದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ನ್ಯಾಷನಲ್ ಸೆಮೆಟರಿ ಆಫ್ ರಿಪಬ್ಲಿಕ್ ಆಫ್ ಕೊರಿಯಾಗೆ ಇಂದು ಬೆಳಗ್ಗೆ ಭೇಟಿ ನೀಡಿ ಮೋದಿ 1,65,000 ಹುತಾತ್ಮ ಯೋಧರ ಸ್ಮಾರಕ ಇರುವ ಸ್ಥಳದಲ್ಲಿ ಮೃತರ ಗೌರವಾರ್ಥ ಪುಷ್ಪಗುಚ್ಚ ಇರಿಸಿ ಶ್ರದ್ಧಾಂಜಲಿ ಸಮರ್ಪಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಕೊರಿಯಾ ಜೊತೆ ಬಾಂಧವ್ಯ ಬಲವರ್ಧನೆಗಾಗಿ ಪ್ರವಾಸ ಕೈಗೊಂಡಿರುವ ಮೋದಿ ನಿನ್ನೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಭಾರತ-ಕೊರಿಯ ವಾಣಿಜ್ಯ ವಿಚಾರಸಂಕಿರಣದಲ್ಲಿ ಪಾಲ್ಗೊಂಡ ಪ್ರಧಾನಿ, ನಂತರ ಸಿಯೋಲ್‍ನ ಯೋನ್ಸೀ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಪ್ರತಿಮೆ ಅನಾವರಣಗೊಳಿಸಿದರು.

ಇಂದು ಕೂಡ ವಿವಿಧ ಅಧಿಕೃತ ಕಾರ್ಯಕ್ರಮ-ಕಲಾಪಗಳಲ್ಲಿ ಮೋದಿ ಭಾಗವಹಿಸಿದ್ದಾರೆ.

Facebook Comments