ಸಪ್ತಪದಿ ತುಳಿದ ನಟಿ ನೇಹಾಪಟೇಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ. 22- ಕಳೆದ ವರ್ಷ ಸ್ಯಾಂಡಲ್‍ವುಡ್ ಸೇರಿದಂತೆ ಎಲ್ಲ ಚಿತ್ರರಂಗಗಳಲ್ಲೂ ಮದುವೆಗಳ ಸಂಭ್ರಮವೇ ಮನೆ ಮಾಡಿತ್ತು, ಈಗ ಸ್ಯಾಂಡಲ್‍ವುಡ್ ನಟಿ ನೇಹಾಪಟೇಲ್ ಸಪ್ತಪದಿ ತುಳಿದಿದ್ದಾರೆ.

ಬೆಂಗಳೂರಿನ ಬಸವೇಶ್ವರ ಸುಗ್ನನ ಕಲ್ಯಾಣಮಂಟಪದಲ್ಲಿ ಎಂಜಿನಿಯರ್ ಪ್ರಣವ್ ಅವರನ್ನು ಹುಬ್ಬಳ್ಳಿ ಮೂಲದ ನಟಿ ನೇಹಾಪಟೇಲ್ ಸಪ್ತಪದಿ ತುಳಿಯುವ ಮೂಲಕ ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದಾರೆ.

ಕಳೆದ ವರ್ಷ ಅಕ್ಟೋಬರ್‍ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೇಹಾ ಪಟೇಲ್‍ರ ವಿವಾಹಕ್ಕೆ ಚಿತ್ರರಂಗದ ಕೆಲ ನಟ, ನಟಿಯರು ಆಗಮಿಸ ನವದಂಪತಿಗೆ ಶುಭ ಕೋರಿದರು.

ನೇಹಾಪಟೇಲ್ ವರ್ಧನ, ಸಂಯುಕ್ತ 2, ಸಿತಾರ, ಸ್ಮೈಲ್ ಪ್ಲೀಸ್ ಚಿತ್ರಗಳಲ್ಲದೆ, ಜೀ ಟಿವಿಯಲ್ಲಿ ಪ್ರಸಾರಗೊಂಡ ಜನುಮದ ಜೋಡಿ ಧಾರಾವಾಹಿಯಲ್ಲಿ ನಟಿಸಿದ್ದರು. ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಕೂಡ ಸ್ಪರ್ಧಿಯಾಗಿ ಭಾಗವಹಿಸಿ ಗಮನ ಸೆಳೆದ್ದರು.

Facebook Comments