ಇಂದಿನ ಪಂಚಾಗ ಮತ್ತು ರಾಶಿಫಲ (22-02-2019-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದೈವದ ರಕ್ಷಣೆ ಇದ್ದರೆ ಬೀದಿಯಲ್ಲಿ ಬಿದ್ದದ್ದೂ ಉಳಿಯುತ್ತದೆ. ಅದಿಲ್ಲದಿದ್ದರೆ ಮನೆಯಲ್ಲಿದ್ದರೂ ಹಾಳಾಗುತ್ತದೆ. ಅನಾಥವಾಗಿ ವನದಲ್ಲಿ ಇದ್ದರೂ ದೈವದ ದೃಷ್ಟಿ ಬಿದ್ದರೆ ಬದುಕುತ್ತಾನೆ. ಮನೆಯಲ್ಲಿಟ್ಟು ಕಾಪಾಡಿದರೂ ದೈವಹತನಾದವನು ಬದುಕುವುದಿಲ್ಲ.  -ಭಾಗವತ

# ಪಂಚಾಂಗ : ಶುಕ್ರವಾರ,22.02.2019
ಸೂರ್ಯ ಉದಯ ಬೆ.06.39 / ಸೂರ್ಯ ಅಸ್ತ ಸಂ.06.27
ಚಂದ್ರ ಉದಯ ರಾ.8.34/ ಚಂದ್ರ ಅಸ್ತ ಬೆ.8.11
ವಿಲಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು
ಮಾಘ ಮಾಸ / ಶುಕ್ಲ ಪಕ್ಷ / ತಿಥಿ : ತೃತೀಯಾ (ಬೆ.10.50)
ನಕ್ಷತ್ರ: ಹಸ್ತ (ರಾ.12.17) / ಯೋಗ: ಶೂಲ (ರಾ.7.33)
ಕರಣ: ಭದ್ರೆ-ಭವ (ಬೆ.10.50-ರಾ.9.26)
ಮಳೆ ನಕ್ಷತ್ರ: ಶತಭಿಷ / ಮಾಸ: ಕುಂಭ / ತೇದಿ: 10

# ರಾಶಿ ಭವಿಷ್ಯ
ಮೇಷ : ಅಂದುಕೊಂಡಂತೆ ನಡೆಯುವುದಿಲ್ಲ, ಮಾತಿನಲ್ಲಿ ಹಿಡಿತವಿರಲಿ
ವೃಷಭ : ಆರ್ಥಿಕ ಸಂಕಷ್ಟ ದೂರಾಗಲಿದ್ದು, ಮಕ್ಕಳಿಂದ ಶುಭವಾರ್ತೆ ಕೇಳುವಿರಿ
ಮಿಥುನ: ಆತುರಪಟ್ಟು ಅವಕಾಶ ವಂಚಿತರಾಗದಿರಿ
ಕಟಕ : ಕೆಲಸಗಳು ಸುಗಮವಾಗಿ ಆಗುವುದು.
ಸಿಂಹ: ನಿಮ್ಮ ಒರಟು ಸ್ವಭಾವದಿಂದ ಆತ್ಮೀಯರಿಂದ ದೂರಾಗುವಿರಿ
ಕನ್ಯಾ: ಬಾಳಸಂಗಾತಿಯ ಬುದ್ಧಿಮತ್ತೆಯಿಂದ ಸಮಸ್ಯೆ ಗಳಿಗೆ ಪರಿಹಾರ
ತುಲಾ: ವಾಕ್ಚತುರ್ಯದಿಂದ ಕಾರ್ಯಸಿದ್ಧಿ, ವಿರೋಧಿಗಳಿಂದ ಹೊಗಳಿಕೆ
ವೃಶ್ಚಿಕ : ನೂತನ ಬಂಡವಾಳ ಹೂಡಿಕೆಗೆ ಯೋಜನೆ
ಧನುಸ್ಸು: ಬೇಡದ ವಿಚಾರಗಳಿಂದ ಮನಸ್ಸಿಗೆ ನೋವು, ತಾಳ್ಮೆ ವಹಿಸಿದರೆ ಒಳಿತು.
ಮಕರ: ಬಂಧುಗಳ ಆಗಮನ ಸಾಧ್ಯತೆ
ಕುಂಭ: ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರ
ಮೀನ: ಅನಾರೋಗ್ಯದಿಂದ ಬಳಲಿಕೆ, ಅಧಿಕ ಖರ್ಚು.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments