ನಾಯಿಗಳ ಆರ್ಭಟ, ಭಯದಲ್ಲಿ ಗ್ರಾಮಸ್ಥರು

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು, ಫೆ.22- ಬೀದಿ ನಾಯಿಗಳು ಕುರಿಗಳ ಮೇಲೆ ದಾಳಿ ನಡೆಸಿ ತಿಂದಿದ್ದಲ್ಲದೆ, ವೃದ್ದೆಯೊಬ್ಬರ ಮೇಲೂ ದಾಳಿ ನಡೆಸಿರುವುದರಿಂದv Áಲೂಕಿನ ಪ್ರಸಾಧಿಹಳ್ಳಿ ಗ್ರಾಮಸ್ಥರು ಭಯಬೀತರಾಗಿದ್ದಾರೆ.  ತಾಲೂಕಿನ ಪ್ರಸಾಧಿಹಳ್ಳಿ ಸಮೀಪ ಪುರಸಭೆಯಿಂದ ನಿರ್ಮಿಸಿರುವ ಘನತ್ಯಾಜ್ಯ ಘಟಕಕ್ಕೆ ಹಾಕುವ ತ್ಯಾಜ್ಯಗಳಲ್ಲಿ ಬರುವಂತಹ ಮಾಸ ಹಾಗೂ ಇನ್ನಿತರೆ ಅಹಾರ ಪದಾರ್ಥಗಳನ್ನು ತಿನ್ನಲು ಬರುವ ನಾಯಿಗಳು ಕುರಿ ಹಾಗೂ ವೃದ್ದೆಯ ಮೇಲೆ ದಾಳಿ ಮಾಡಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಸಾಧಿಹಳ್ಳಿ ಗ್ರಾಮದ ಮಂಜಣ್ಣ ಎಂಬುವವರು ಸಾಕಷ್ಟು ಕುರಿಗಳನ್ನು ಸಾಕಿದ್ದು, ಈ ಕುರಿಗಳನ್ನು ಮೇಯಲು ಬಿಟ್ಟ ಸಂದರ್ಭದಲ್ಲಿ ಹದಿನೈದಕ್ಕೂ ಹೆಚ್ಚು ನಾಯಿಗಳು ಕುರಿ ಹಿಂಡಿನ ಮೇಲೆ ದಾಳಿ ಮಾಡಿವೆ.ಕುರಿ ಕಾಯುತಿದ್ದ ಮಂಜಮ್ಮ ಅವರ ಮೇಲೂ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿವೆ.

ಇಲ್ಲಿನ ಘನತ್ಯಾಜ್ಯ ಘಟಕಕ್ಕೆ ಬೇಲೂರಿನಿಂದ ತರುವಂತಹ ತ್ಯಾಜ್ಯಗಳಲ್ಲಿರುವ ಮಾಸ ಮತ್ತಿತರೆ ಅಹಾರ ಪದಾರ್ಥಗಳನ್ನು ತಿನ್ನುವ ನಾಯಿಗಳು ಇತ್ತೀಚೆಗೆ ಗ್ರಾಮದ ಸಮೀಪಕ್ಕು ಬಂದು ಕುರಿ ಕೋಳಿಗಳನ್ನು ಹಿಡಿದು ತಿನ್ನಲು ಪ್ರಾರಂಭಿಸಿವೆ ಎನ್ನುತ್ತಾರೆ ಗ್ರಾಮಸ್ಥ ಮಂಜಣ್ಣ, ಮಕ್ಕಳು ಮತ್ತು ವೃದ್ದರ ಮೇಲೆ ದಾಳಿ ನಡೆಸಿದರೆ ಯಾರು ಹೊಣೆ? ನಾಯಿಗಳ ದಾಳಿಯಿಂದ ನಾವುಗಳು ಭಯಭೀತರಾಗಿದ್ದು ತಕ್ಷಣವೆ ಇಲ್ಲಿನ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಿ ನಮಗೆ ನೆಮ್ಮದಿ ಜೀವನ ನಡೆಸುವುದಕ್ಕೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಪ್ರಸಾಧಿಹಳ್ಳಿ ಸಮೀಪ ನಿರ್ಮಿಸಿರುವ ಘನತ್ಯಾಜ್ಯ ಘಟಕದ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಗೇಟನ್ನು ಅಳವಡಿಸಲಾಗಿದೆ. ಅಲ್ಲದೆ ಪಟ್ಟಣದಲ್ಲಿ ನಾಯಿಗಳನ್ನು ಹಿಡಿಯದಂತೆ ಪ್ರಾಣಿದಯಾ ಸಂಘದವರು ನ್ಯಾಯಾಲಯಕ್ಕೆ ಹೋಗಿರುವುದರಿಂದ ಇತ್ತೀಚೆಗೆ ನಾಯಿಗಳನ್ನು ಹಿಡಿದಿಲ್ಲ. ಆದರೆ ಪ್ರಸಾಧಿಹಳ್ಳಿ ಗ್ರಾಮಸ್ಥರು ಆತಂಕ ಪಡುತ್ತಿರುವ ಹಿನ್ನೆಲೆಯಲ್ಲಿ ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

Facebook Comments