ಕಲ್ಲಂಗಡಿ ಹಣ್ಣಿನ ಬೀಜದ ಉಪಯೋಗಗಳು ಗೊತ್ತೇ ..?

ಈ ಸುದ್ದಿಯನ್ನು ಶೇರ್ ಮಾಡಿ

ದಾಹ ತಣಿಸುವಂತಹ ಒಂದು ಹಣ್ಣಿದ್ದರೆ ಅದು ಕಲ್ಲಂಗಡಿ ಮಾತ್ರ. ಬಿರು ಬೇಸಿಗೆಯಲ್ಲಿ ಒಂದು ತುಂಡು ಕಲ್ಲಂಗಡಿ ಹಣ್ಣನ್ನು ತಿಂದರೆ ಆಗ ಹೊಟ್ಟೆ ತುಂಬಿ, ಬಾಯಾರಿಕೆ ಕೂಡ ತಣಿಯುವುದು. ಬೇಸಿಗೆಯಲ್ಲಿ ಇದು ಅತೀ ಹೆಚ್ಚು ಬಳಸಲ್ಪಡುವ ಹಾಗೂ ಮಾರಾಟವಾಗುವಂತಹ ಹಣ್ಣು. ನಮ್ಮಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣಿನ ತಿರುಳು ಕೆಂಪು ಆಗಿರುವುದು.

ಆದರೆ ಇದು ಹಳದಿ ಹಾಗೂ ಕಿತ್ತಳೆ ಹಣ್ಣದಲ್ಲೂ ವಿಶ್ವದೆಲ್ಲೆಡೆಯಲ್ಲಿ ಲಭ್ಯವಿದೆ. ಬಿಳಿ ಸಿಪ್ಪೆ ಹೊಂದಿರುವಂತಹ ಕಲ್ಲಂಗಡಿ ಹಣ್ಣು ಕೂಡ ಇದೆ. ಕೇವಲ 25 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇದನ್ನು ಬೆಳೆಸಬಹುದು. ಸಾಂಪ್ರದಾಯಿಕವಾಗಿ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ವಿಯೆಟ್ನಾಂನ ಹೊಸ ವರ್ಷದ ರಜೆ ಸಂದರ್ಭದಲ್ಲಿ ಸೇವನೆ ಮಾಡಲಾಗುತ್ತದೆ ಮತ್ತು ಚೀನಾದ ಹೊಸ ವರ್ಷದ ಆಚರಣೆ ವೇಳೆ ಬೇರೆ ಬೀಜಗಳ ಜತೆಗೆ ಈ ಬೀಜಗಳನ್ನು ಸೇವನೆ ಮಾಡಲಾಗುತ್ತದೆ.

ಇದು ಇಂದಿನ ದಿನಗಳಲ್ಲಿ ಜಗತ್ತಿನಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿದೆ ಇದರಲ್ಲಿ ವಿಟಮಿನ್‌ಎ, ಬಿ1, ಬಿ6, ವಿಟಮಿನ್‌ಸಿ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇವೆ. ಸಾಮಾನ್ಯವಾಗಿ ಎಲ್ಲರೂ ಹಣ್ಣಿನ ತಿರುಳನ್ನು ಸೇವಿಸಿ ಬೀಜಗಳನ್ನು ಎಸೆಯುತ್ತಾರೆ. ಆದರೆ ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿಯೂ ಆರೋಗ್ಯಕರ ಅಂಶಗಳಿವೆ.

ಕಲ್ಲಂಗಡಿ ಬೀಜಗಳಲ್ಲಿರುವ ಉತ್ತಮ ಪ್ರಮಾಣದ ಮೆಗ್ನೇಶಿಯಂ ಹೃದಯವು ಸಹಜವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ.  ಇದರಲ್ಲಿರುವ ಆಯಂಟಿ ಆಕ್ಸಿಡೆಂಟ್ ವೃದ್ಧಾಪ್ಯವನ್ನು ನಿಧಾನವಾಗಿಸುತ್ತದೆ.

ಮುಖದ ಮೇಲೆ ಮೂಡುವ ಮೊಡವೆಗಳನ್ನು ನಿವಾರಿಸಲು ಈ ಬೀಜಗಳಿಂದ ತೆಗೆದ ಎಣ್ಣೆ ಉತ್ತಮ. ಅಷ್ಟೇ ಅಲ್ಲ, ಚರ್ಮದ ಸೂಕ್ಷ್ಮ ರಂಧ್ರದಲ್ಲಿ ಇರುವ ಕೊಳೆ ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ.

ಈ ಎಣ್ಣೆಯಲ್ಲಿರುವ ಪ್ರೋಟೀನುಗಳು ಹಾಗೂ ಅಮೈನೋ ಆಮ್ಲಗಳು ಕೂದಲಿನ ಬುಡವನ್ನು ದೃಢಗೊಳಿಸುತ್ತವೆ. ಈ ಬೀಜಗಳನ್ನು ಹುರಿದು ಪುಡಿ ಮಾಡಿ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಮೆಲನಿನ್‌ಎಂಬ ವರ್ಣ ದ್ರವ್ಯವನ್ನು ಹೆಚ್ಚಿಸಿ ಕೂದಲ ಕಾಂತಿಯನ್ನು ಹೆಚ್ಚಿಸುತ್ತದೆ.

ಈ ಬೀಜಗಳಲ್ಲಿರುವ ಮೆಗ್ನೇಶಿಯಂ ಉತ್ತಮ ಪ್ರಮಾಣದಲ್ಲಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಕಲ್ಲಂಗಡಿ ಬೀಜವನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಉರಿಯೂತದಿಂದ ಶರೀರದ ಯಾವುದಾದರೊಂದು ಭಾಗದಲ್ಲಿ ಬಾವು ಕಾಣಿಸಿಕೊಂಡರೆ, ಮುಕ್ಕಾಲು ಕಪ್‌ಬಿಸಿ ನೀರಿಗೆ ಒಂದು ಚಮಚ ಈ ಪುಡಿ, ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಚೆನ್ನಾಗಿ ಕಲಸಿ ದಿನಕ್ಕೆರಡು ಬಾರಿ ಕುಡಿಯಬೇಕು. ಇದರಿಂದ ಬಾವು ಕಡಿಮೆಯಾಗುತ್ತದೆ.

 

Facebook Comments