ಕೇಂದ್ರ ವಲಯದ ಐಜಿಪಿಯಾಗಿ ಶರತ್ಚಂದ್ರ ಅಧಿಕಾರ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.23- ದಕ್ಷಿಣ ವಲಯ ಐಜಿಪಿ ಆಗಿದ್ದ ಕೆ.ವಿ.ಶರತ್ ಚಂದ್ರ ಇಂದು ಕೇಂದ್ರ ವಲಯ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.
ಕೇಂದ್ರ ವಲಯ ಐಜಿಪಿಆಗಿದ್ದ ಬಿ. ದಯಾನಂದ ಅವರನ್ನು ರಾಜ್ಯಸರಕಾರ ಎರಡು ದಿನಗಳ ಹಿಂದ ಗುಪ್ತದಳಕ್ಕೆ ವರ್ಗಾವಣೆ ಮಾಡಿತ್ತು.

ದಯಾನಂದ ಅವರಿಂದ ತೆರವಾಗಿದ್ದ ದಕ್ಷಿಣ ವಲಯ ಐಜಿಪಿ ಸ್ಥಾನವನ್ನು ಕೆ.ವಿ. ಶರತ್‍ಚಂದ್ರ ಅಲಂಕರಿಸಿದರು. ಕೆ.ವಿ.ಶರತ್ ಚಂದ್ರ ಅವರು ಪಶ್ಚಿಮ ವಿಭಾಗದ ಡಿಸಿಪಿ ಆಗಿ, ಜಂಟಿ ಪೊಲೀಸ್ ಆಯುಕ್ತರಾಗಿ, ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಪೊಲೀಸ್ ಇಲಾಖೆ ವಿವಿಧ ಸ್ಥರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಸರಕಾರ ನನ್ನ ಮೇಲೆ ನಂಬಿಕೆ ಇಟ್ಟು ಕೇಂದ್ರ ವಲಯ ಐಜಿಪಿಯನ್ನಾಗಿ ನೇಮಕ ಮಾಡಿದೆ. ಕೇಂದ್ರ ವಲಯ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ಅಡ್ಡಿ ಆತಂಕ ಎದುರಾಗದಂತೆ ನೋಡಿಕೊಳ್ಳುತ್ತೇನೆ ಎಂದು ಶರತ್‍ಚಂದ್ರ ತಿಳಿಸಿದ್ದಾರೆ.

Facebook Comments

Sri Raghav

Admin