ಮುಂದಿನ ವಾರ ಬಹು ನಿರೀಕ್ಷಿತ `ಯಜಮಾನ’ ಚಿತ್ರ ರಿಲೀಸ್

ಈ ಸುದ್ದಿಯನ್ನು ಶೇರ್ ಮಾಡಿ

ಬಹು ನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ಮಾ.1ರಂದು ಬಿಡುಗಡೆಯಾಗುತ್ತಿದೆ. ಕಳೆದ ಫೆ.19ರಂದು ಯಜಮಾನ ಚಿತ್ರದ ಮುಹೂರ್ತ ನಡೆಸಲಾಗಿದ್ದು, ಈಗ ಚಿತ್ರ ಬಿಡುಗಡೆಯಾಗುವ ಹಂತಕ್ಕೆ ಬಂದಿರುವುದರಿಂದ ಚಿತ್ರ ತಂಡವು ಮಾಧ್ಯಮದವರ ಮುಂದೆ ತಮ್ಮ ಚಿತ್ರದ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ನಟ ದರ್ಶನ್ ಮಾತನಾಡುತ್ತಾ, ವಿಷ್ಣುವರ್ಧನ್ ಸಾರ್ ನಟಿಸಿದ್ದ ಯಜಮಾನ ಚಿತ್ರಕ್ಕೂ ನಮ್ಮ ಯಜಮಾನಕ್ಕೂ ಯಾವುದೇ ರೀತಿಯ ಹೋಲಿಕೆ ಇಲ್ಲ. ನಿರ್ಮಾಪಕರು ಪ್ರತಿ ದೃಶ್ಯದಲ್ಲೂ ನನಗೆ ಹೇಳಿ ಮುಂದುವರೆಯುತ್ತಿದ್ದರೂ, ಸಾಮಾನ್ಯವಾಗಿ ನಿರ್ದೇಶಕ, ನಿರ್ಮಾಪಕರು, ಕಥೆ ಮಾಡುವಾಗ ಸಂಗೀತ ನಿರ್ದೇಶಕರಿಗೆ ನಮ್ಮ ಚಿತ್ರಕ್ಕೆ ಇಷ್ಟು ಹಾಡು ಬೇಕು ಎಂದು ಹೇಳುತ್ತಾರೆ. ಅದಕ್ಕೆ ತಕ್ಕಂತೆ ರಾಗಗಳನ್ನು ನೀಡುತ್ತಾರೆ.

ಆದರೆ ಈ ಬ್ಯಾನರ್‍ನಲ್ಲಿ ಸಂಗೀತ ನಿರ್ದೇಶಕರೂ ಕೂಡ ನಮ್ಮ ಜೊತೆಯಲ್ಲಿ ಕೂರಿಸಿಕೊಂಡು ಚರ್ಚಿಸುವುದರಿಂದ ಇಂಪಾದ ಹಾಡುಗಳು ಸಿಕ್ಕಿದೆ. ಯಜಮಾನ ಚಿತ್ರದಲ್ಲಿ 4 ಫೈಟ್‍ಗಳಿದ್ದು ವಿನೋದ್ ಅದ್ಭುತವಾಗಿ ಕಂಪೋಸ್ ಮಾಡಿದ್ದಾರೆ ಎಂದು ಹೇಳಿಕೊಂಡರು. ಈ ಚಿತ್ರದಲ್ಲಿ ದೇವರಾಜ್ ನಾಯಕಿಯ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರಂತೆ.

ನಿರ್ಮಾಪಕಿ ಶೈಲಜನಾಗ್, ನಾಯಕಿ ತಾನ್ಯಾ ಹೋಪ್, ಖಳ ನಟ ರವಿಶಂಕರ್, ಮಿಠಾಯಿ ಸೂರಿಯಾಗಿ ಗುರುತಿಸಿಕೊಂಡಿರುವ ಧನಂಜಯ್, ಸಂಭಾಷಣೆಗಾರ ಚೇತನ್‍ಕುಮಾರ್, ನಿರ್ದೇಶಕ ಪಿ.ಕುಮಾರ್, ಸಾಹಿತಿ ಕವಿರಾಜ್ ಮತ್ತು ನಿರ್ಮಾಪಕಿ ಪತಿ ಬಿ.ಸುರೇಶ್ ಚಿತ್ರದ ಕುರಿತು ಮಾತನಾಡಿದರು. ರಶ್ಮಿಕಾ ಮಂದಣ್ಣ ದರ್ಶನ್‍ಗೆ ಜೋಡಿಯಾಗಿ ಅಭಿನಯಿಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಹಾಜರಿರಲಿಲ್ಲ.

Facebook Comments