ಬಿಗ್ ಬ್ರೇಕಿಂಗ್ : ಚುನಾವಣಾ ಹೊಸ್ತಿಲಲ್ಲಿ 354 ಇನ್‍ಸ್ಪೆಕ್ಟರ್’ಗಳ ಭಾರೀ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.23- ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಹಿಂದೆಂದೂಕ ಕಾಣದಂತೆ ಪೊಲೀಸ್ ಇನ್‍ಸ್ಪೆಕ್ಟರ್‍ಗಳ ಭಾರೀ ವರ್ಗಾವಣೆ ಪಟ್ಟಿ ಹೊರಬಿದ್ದಿದೆ.
ರಾಜ್ಯಾದ್ಯಂತ 354 ಇನ್‍ಸ್ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದಕ್ಕೆ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆಯಲಾಗಿದೆ ಎಂದು ವರ್ಗಾವಣೆಯ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಮುಖವಾಗಿ ಬೆಂಗಳೂರಿನ ಬಹುತೇಕ ಪೊಲೀಸ್ ಠಾಣೆಗಳ ಇನ್‍ಸ್ಪೆಕ್ಟರ್‍ಗಳು ವರ್ಗಾವಣೆಯಾಗಿದ್ದು, ಕೆಲವರು ಸಿಐಡಿ, ಗುಪ್ತಚರ ಹಾಗೂ ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಂಡಿದ್ದಾರೆ.

ಸಂಚಾರಿ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗಗಳಲ್ಲೂ ಇನ್‍ಸ್ಪೆಕ್ಟರ್‍ಗಳು ವರ್ಗಾವಣೆಯಾಗಿದ್ದು, ಕೂಡಲೇ ವರ್ಗಾವಣೆಗೊಂಡ ಸ್ಥಳಕ್ಕೆ ತೆರಳಿ ಕಾರ್ಯಭಾರ ಸ್ವೀಕರಿಸಬೇಕೆಂದು ಸೂಚಿಸಲಾಗಿದೆ. ಇದಕ್ಕೂ ಮುನ್ನವೇ ಇಂದು ಬೆಳಗ್ಗೆ ಕೆಲವು ನಾನ್ ಐಪಿಎಸ್ ಅಧಿಕಾರಿಗಳು ಹಾಗೂ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಬಿದ್ದಿತ್ತು.

lnspector-trans-2019-001 lnspector-trans-2019-002 lnspector-trans-2019-003 lnspector-trans-2019-004 lnspector-trans-2019-005 lnspector-trans-2019-006 lnspector-trans-2019-007 lnspector-trans-2019-008 lnspector-trans-2019-009 lnspector-trans-2019-010 lnspector-trans-2019-011 lnspector-trans-2019-012 lnspector-trans-2019-013 lnspector-trans-2019-014 lnspector-trans-2019-015

Facebook Comments