ಬಾನಂಗಳಲ್ಲಿ ಮತ್ತೆ ಮಿಂಚಿದ ‘ಸೂರ್ಯ ಕಿರಣ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ಏರೋ ಇಂಡಿಯಾ ಪ್ರದರ್ಶನಕ್ಕೆ ಮುನ್ನ ತಾಲೀಮು ವೇಳೆ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ದುರಂತ ಸಾವಿಗೀಡಾದ ನಂತರ ಪ್ರೇಕ್ಷಕರಲ್ಲಿ ತೀವ್ರ ನಿರಾಸೆ ಮೂಡಿಸಿದ್ದ ಸೂರ್ಯ ಕಿರಣ ವಿಮಾನಗಳು ಇಂದು ಯಲಹಂಕದ ಬಾನಂಗಳಲ್ಲಿ ಮತ್ತೆ ಹಾರಾಟ ನಡೆಸಿ ರಂಗುರಂಗಿನ ಚಿತ್ತಾರ ಬಿಡಿಸಿದವು.

ಭಾರತೀಯ ವಾಯುಪಡೆಯ ವೈಮಾನಿಕ ಕಸರತ್ತು ಪ್ರದರ್ಶನದಲ್ಲಿ ಮುಂಚೂಣಿಯಲ್ಲಿರುವ ಸೂರ್ಯ ಕಿರಣ ವಿಮಾನಗಳ ಆಕರ್ಷಕ ಪ್ರದರ್ಶನದ ಬಗ್ಗೆ ಫೆ. 19ರಂದು ಯಲಹಂಕ ಬಳಿ ಸಂಭವಿಸಿದ ದುರಂತ ಅನುಮಾನ ಮೂಡಿಸಿತ್ತು.

ಆದರೆ ಇಂದು 7ಸೂರ್ಯಕಿರಣ ವಿಮಾನಗಳು ಗಗನದಲ್ಲಿ ಅದ್ಭುತ ಸ್ಟಂಟ್‍ಗಳನ್ನು ಪ್ರದರ್ಶಿಸಿ ಅಸಂಖ್ಯಾತ ಪ್ರೇಕ್ಷಕರಿಗೆ ಮೆಚ್ಚುಗೆಗೆ ಪಾತ್ರವಾದವು.

ದುರಂತದಲ್ಲಿ ಮೃತಪಟ್ಟ ತನ್ನ ಸಹದ್ಯೋಗಿ ವಿಂಗ್ ಕಮಾಂಡ್ ಗಾಂಧಿ ಅವರಿಗೆ ಸೂರ್ಯ ಕಿರಣ ವಿಮಾನಗಳ ಪೈಲೆಟ್‍ಗಳು ರೋಚಕ ಕಸರತ್ತು ಮೂಲಕ ಶ್ರದ್ಧಾಂಜಲಿ ಸಲ್ಲಿದರು.

ಈ ಬಾರಿ ಯಲಹಂಕ ಏರೋ ಇಂಡಿಯಾ ಪ್ರದರ್ಶನದಲ್ಲಿ ಸೂರ್ಯ ಕಿರಣ ವಿಮಾನಗಳ ಕಣ್ಮನಸೆಳೆಯುವ ಪ್ರದರ್ಶನದಿಂದ ವಂಚಿತರಾಗುತ್ತೇವೆ ಎಂಬ ನಿರಾಸೆಯಲ್ಲಿದ್ದ ವೈಮಾನಿಕ ಪ್ರಿಯರಿಗೆ ಸೂರ್ಯಕಿರಣ ವಿಮಾನಗಳು ಚಿತ್ತಾಕರ್ಷಕ ಷೋ ಗಮನ ಸೆಳೆಯಿತು.

Facebook Comments