ಮಗಳ ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ಕನಸುಗಾರ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರಿ ಗೀತಾಂಜಲಿ ನಿಶ್ಚಿತಾರ್ಥ ನಿನ್ನೆ ನಗರದ ಒರಾಯನ್‍ಮಾಲ್ ಪಕ್ಕದಲ್ಲಿರುವ ಶೆರಾಟನ್ ಹೋಟೆಲ್‍ನಲ್ಲಿ ಅದ್ಧೂರಿಯಾಗಿ ನಡೆಯಿತು.

ಕನಸುಗಾರ ರವಿಚಂದ್ರನ್ ಮತ್ತು ಸುಮತಿ ದಂಪತಿಗೆ ಒಬ್ಬಳೇ ಮಗಳಾದ ಗೀತಾಂಜಲಿ ಅವರು ಉದ್ಯಮಿ ಅಜಯ್ ಅವರೊಂದಿಗೆ ವಿವಾಹವಾಗಲು ನಿಶ್ಚಯವಾಗಿದ್ದು, ನಿನ್ನೆ ಶೆರಾಟನ್ ಹೋಟೆಲ್‍ನಲ್ಲಿ ಅದ್ಧೂರಿಯಾಗಿ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ನಡೆಯಿತು.

ರವಿಚಂದ್ರನ್ ಅವರಿಗೆ ಮನೋರಂಜನ್ ಮತ್ತು ವಿಕ್ರಂ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಮನೋರಂಜನ್ ಈಗಾಗಲೇ ಚಲನ ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ.

ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ರವಿಚಂದ್ರನ್ ಕುಟುಂಬ ವರ್ಗ, ಚಿತ್ರರಂಗದ ಕೆಲವು ಗಣ್ಯರು, ಹಾಗೂ ನಟ-ನಟಿಯರು ಆಗಮಿಸಿ ಗೀತಾಂಜಲಿ ಮತ್ತು ಅಜಯ್‍ಗೆ ಶುಭಾಯಶ ಕೋರಿದ್ದಾರೆ. ಮದುವೆ ದಿನಾಂಕದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ದೊರೆತಿಲ್ಲ.

Facebook Comments