ಮತ್ತಿಬ್ಬರು ಜೈಷ್ ಕ್ರಿಮಿಗಳನ್ನು ಹೊಡೆದುರುಳಿಸಿದ ಭಾರತೀಯ ಯೋಧರು..!

ಈ ಸುದ್ದಿಯನ್ನು ಶೇರ್ ಮಾಡಿ

ಬಾರಾಮುಲ್ಲಾ, ಫೆ.23- ಪುಲ್ವಾಮಾ ದಾಳಿಯ ರೂವಾರಿಯಾಗಿದ್ದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಜಮ್ಮು ಕಾಶ್ಮೀರದ ಸೋಪೊರದಲ್ಲಿ ಪ್ರಾರಂಭವಾಗಿದ್ದ ಎನ್‍ಕೌಂಟರ್‍ನಲ್ಲಿ ಇದುವರೆಗೆ ಸೇನಾಪಡೆ ಇಬ್ಬರು ಉಗ್ರರನ್ನು ಹತ್ಯೆಗೈದಿದೆ. ಅಲ್ಲದೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.

ಎನ್ ಕೌಂರ್ಟ ನಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ. ಉಗ್ರರ ಗುರುತು ಪತ್ತೆಯಾಗಿಲ್ಲ. ಸೇನಾಪಡೆಯ ಯಾವ ಯೋಧರಿಗೆಗಾಯವಾಗಿಲ್ಲ ಎಂದು ದಕ್ಷಿಣ ಕಾಶ್ಮೀರದ ಡಿಐಜಿ ಅತುಲ್ ಕುರ್ಮಾ ಗೋಯಲ್ ಎಎನ್‍ಐಗೆ ಮಾಹಿತಿ ನೀಡಿದ್ದಾರೆ.

ಈ ಭಾಗದಲ್ಲಿ ಉಗ್ರರು ಸಕ್ರಿಯರಾಗಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸೇನಾಪಡೆ ಉಗ್ರರ ಶೋಧ ಕಾರ್ಯ ನಡೆಸಿದೆ. ಈ ವೇಳೆ ಉಗ್ರರು ಸೇನಾ ಪಡೆ ಮೇಲೆ ಗುಂಡು ಹಾರಿಸಿದ್ದಾರೆ.

ಪ್ರತಿಯಾಗಿ ಸೇನಾಪಡೆ ಯೋಧರು ದಾಳಿ ನಡೆಸಿ ಇಬ್ಬರು ಉಗ್ರರನ್ನು ಕೊಂದಿದ್ದಾರೆ.  ಫೆ. 14ರಂದು ಪುಲ್ವಾಮಾದಲ್ಲಿ ಜೈಷ್ ಸಂಘಟನೆಯ ಆತ್ಮಾಹುತಿ ಬಾಂಬ್ ನಡೆಸಿದ್ದ ಉಗ್ರ ದಾಳಿಯಲ್ಲಿ ನಲವತ್ತಕ್ಕೆ ಹೆಚ್ಚು ಯೋಧರು ಹುತಾತ್ಮರಾಗಿದ್ದರು.

Facebook Comments

Sri Raghav

Admin