ರಸ್ತೆ ಅಪಘಾತದಲ್ಲಿ ಎಐಎಡಿಎಂಕೆ ಸಂಸದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಫೆ.23- ತಮಿಳುನಾಡಿನ ವಿಲ್ಲಾಪುರಂನಲ್ಲಿ ಇಂದು ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಐಎಡಿಎಂಕೆ ನಾಯಕ ಮತ್ತು ಸಂಸದ ಎಸ್.ರಾಜೇಂದ್ರನ್ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ಇತರ ಮೂವರ ಸ್ಥಿತಿ ಶೋಚನೀಯವಾಗಿದೆ.

ವಿಲ್ಲಾಪುರಂ ಕ್ಷೇತ್ರದ ಸಂಸದ ರಾಜೇಂದ್ರನ್ ನಿನ್ನೆ ರಾತ್ರಿ ಥೈಲಾಪುರಂನಲ್ಲಿ ಪಿಎಂಕೆ ನಾಯಕ ರಾಮದಾಸ್ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದರು.ವಣ್ಣೂರು-ತಿಂಡಿವನಂ ಬಳಿ ಬೆಳಗಿನ ಜಾವ 4.35ರಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು.

ರಾಜೇಂದ್ರನ್ ಅವರ ತಲೆ ಮತ್ತು ಎದೆಗೆ ತೀವ್ರ ಗಾಯಗಳಾಗಿತ್ತು. ಅವರೊಂದಿಗೆ ಗಾಯಗೊಂಡ ಇತರ ಮೂವರನ್ನು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರ  ಅವರು ಮರಣ ಹೊಂದಿದ್ದರು. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಸಂತಾಪ: ರಾಜೇಂದ್ರನ್ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಯಡಪ್ಪಾಡಿ ಪಳನಿ ಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Facebook Comments