ಜೋರಾಗಿದೆ ‘ಪಡ್ಡೆ ಹುಲಿ’ ಘರ್ಜನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ಅಬ್ಬರಿಸಲು ಯಂಗ್ ಟೈಗರ್ ಸಿದ್ಧರಾಗಿದ್ದಾರೆ. ಕನ್ನಡ ಚಿತ್ರರಂಗದ ಗಂಡುಗಲಿ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು ಅಭಿನಯದ ಮೊದಲ ಚಿತ್ರ ಪಡ್ಡೆಹುಲಿ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ತನ್ನ ಮೊದಲ ಸಿನಿಮಾದಲ್ಲಿಯೇ ಡ್ಯಾನ್ಸ್, ಸಾಹಸ, ಸ್ಟೈಲ್ ಎಲ್ಲವನ್ನೂ ಕರಗತ ಮಾಡಿಕೊಂಡು ಇಂಡಸ್ಟ್ರಿಗೆ ಬರುತ್ತಿರುವ ಶ್ರೇಯಸ್ ಕನ್ನಡ ಚಿತ್ರರಂಗದಲ್ಲಿ ಹೊಸ ಇಮೇಜ್ ಗಿಟ್ಟಿಸಿಕೊಳ್ಳುವ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ ಎನ್ನುವುದು ಟ್ರೈಲರ್‍ನಲ್ಲಿ ಗೊತ್ತಾಗುತ್ತದೆ.

ನಿರ್ಮಾಪಕ ಕೆ. ಮಂಜು ಅವರ ಪುತ್ರನ ಮೊದಲ ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಲೇಜ್‍ನ ಕಬಡ್ಡಿ ಟೀಂನ ಕ್ಯಾಪ್ಟನ್ ಗೆಟಪ್‍ನಲ್ಲಿ ಶ್ರೇಯಸ್ ಜೊತೆ ರಕ್ಷಿತ್ ಕೂಡ ಅಭಿನಯಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹೊಸದಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಹೊಸಬರನ್ನು ಸದಾ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾ ಸಹಕಾರ ನೀಡುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದೊಡ್ಡ ಗುಣ. ಅದೇ ರೀತಿ ಅವರು ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರಿಗೂ ಕೂಡ ಆರಂಭದಿಂದಲೂ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ.

ಇದೀಗ ಶ್ರೇಯಸ್ ಅಭಿನಯದಲ್ಲಿ ಮೂಡಿಬರುತ್ತಿರುವ ಗುರು ದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರದ ಟ್ರೈಲರನ್ನು ನಟ ದರ್ಶನ್ ಅವರೇ ಬಿಡುಗಡೆ ಮಾಡಿ ಶ್ರೇಯಸ್‍ಗೆ ಶುಭ ಕೋರಿದ್ದಾರೆ. ಈ ಹಿಂದೆ ಪಡ್ಡೆಹುಲಿ ಚಿತ್ರದ ಸಾಹಸಸಿಂಹನ ನೆನಪಲ್ಲಿ ಮೂಡಿಬಂದಿದ್ದ ಹಾಡನ್ನು ನೋಡಿ ಮೆಚ್ಚಿಕೊಂಡಿದ್ದ ದರ್ಶನ್, ಶ್ರೇಯಸ್ ಅಭಿನಯವನ್ನು ಹೊಗಳಿ ಮಾತಾಡಿದ್ದರು.

Paddehuli

ಪಡ್ಡೆಹುಲಿ ಒಂದು ಮ್ಯೂಸಿಕಲ್ ಲವ್ ಸ್ಟೋರಿ ಆಗಿದ್ದು, ಶ್ರೇಯಸ್ ಸಾಕಷ್ಟು ತಯಾರಿ ಮಾಡಿಕೊಂಡೇ ಅಖಾಡಕ್ಕಿಳಿದಿರುವ ಕುರಿತು ನನಗೆ ತಿಳಿದಿದೆ. ಅವರ ಕಣ್ಣಿನಲ್ಲಿ ಒಂದು ಶಕ್ತಿ ಇದೆ. ಖಂಡಿತ ಭರವಸೆಯ ನಟನಾಗಿ ಬೆಳೆಯುತ್ತಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡುತ್ತ ಇಡೀ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

ತೇಜಸ್ವಿನಿ ಎಂಟರ್‍ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಎಂ. ರಮೇಶ್ ರೆಡ್ಡಿ (ನಂಗ್ಲಿ) ಅವರು ಈ ಚಿತ್ರಕ್ಕೆ ದೊಡ್ಡ ಮಟ್ಟದ ಬಂಡವಾಳ ಹಾಕಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ನಿರ್ದೇಶಕರಾದ ಗುರುದೇಶ್‍ಪಾಂಡೆ ಮಾತನಾಡಿ, ದರ್ಶನ್ ಅವರ ಸ್ನೇಹ ಸಿಕ್ಕಿದ್ದು ನಮ್ಮ ಪುಣ್ಯ. ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿರುವುದು ನಮಗೆ ಶಕ್ತಿ ಸಿಕ್ಕಂತಾಗಿದೆ ಎಂದು ದರ್ಶನ್‍ರ ಗುಣಗಾನ ಮಾಡುತ್ತ ಚಿತ್ರದ ಕುರಿತು ಮಾಹಿತಿ ನೀಡಿದರು.

ಆದೇ ರೀತಿ ನಾಯಕ ಶ್ರೇಯಸ್ ಕೂಡ ಮಾತನಾಡಿ, ನನ್ನಂತಹ ಹೊಸಬರಿಗೆ ಸದಾ ಪ್ರೋತ್ಸಾಹ ನೀಡುವ ಡಿ ಬಾಸ್‍ಗೆ ನಾನು ಸದಾ ಚಿರಋಣಿಯಾಗಿರುತ್ತೇನೆ. ನನ್ನ ಹಾಡನ್ನು ವೀಕ್ಷಿಸಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನನ್ನ ಖುಷಿಯನ್ನು ಇಮ್ಮಡಿಗೊಳಿಸಿದೆ. ಸದಾ ಅವರ ಪ್ರೀತಿ-ವಿಶ್ವಾಸದಲ್ಲಿ ಇರಬೇಕೆಂದು ಬಯಸುತ್ತೇನೆಂದು ಹೇಳಿಕೊಳ್ಳುತ್ತ ಚಿತ್ರಕ್ಕಾಗಿ ತಾವು ಪಟ್ಟ ಪೂರ್ವ ತಯಾರಿಯ ಮಾಹಿತಿಯನ್ನು ತೆರೆದಿಟ್ಟರು.

ಉಳಿದಂತೆ ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೇರಿದಂತೆ ಚಿತ್ರತಂಡದವರು ಚಿತ್ರದ ಕುರಿತು ಮಾಹಿತಿ ತೆರೆದಿಟ್ಟರು. ವಿಶೇಷವಾಗಿ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಧಾರಾಣಿ ಮತ್ತೊಮ್ಮೆ ಒಟ್ಟಿಗೆ ಬೆಳ್ಳಿ ಪರದೆ ಮೇಲೆ ಪಡ್ಡೆಹುಲಿ ಚಿತ್ರದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರಕ್ಕೆ ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ, ಡಿಫರೆಂಟ್ ಡ್ಯಾನಿಯ ಸಾಹಸ ಸಂಯೋಜನೆ ಇದೆ. ಎಲ್ಲ ಅಂದುಕೊಂಡಂತೆ ನಡೆಯುತ್ತಿದ್ದು, ಚಿತ್ರದ ಧ್ವನಿಸುರುಳಿ ಬಿಡುಗಡೆ ಅತಿ ಶೀಘ್ರದಲ್ಲಿ ಅದ್ಧೂರಿಯಾಗಿ ನಡೆಯಲಿದೆಯಂತೆ.

Facebook Comments

Sri Raghav

Admin