‘ಕೆಜಿಎಫ್​’ಗಾಗಿ 20 ವರ್ಷಗಳ ನಂತರ ರವೀನಾ ಸ್ಯಾಂಡಲ್ವುಡ್’ಗೆ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

ಕನ್ನಡ ಸಿನಿ ರಂಗದಲ್ಲಿ ಹೊಸ ದಾಖಲೆ ಬರೆದ ಸಿನಿಮಾ ‘ಕೆ.ಜಿ.ಎಫ್’. ಐದು ಭಾಷೆಗಳಲ್ಲಿ ತೆರೆ ಕಂಡು ಯಶಸ್ಸು ಕಂಡ ಈ ಸಿನಿಮಾದ ಚಾಪ್ಟರ್ 2 ಚಿತ್ರೀಕರಣ ಇನ್ನೇನು ಆರಂಭವಾಗಬೇಕಿದೆ. ಅದಕ್ಕಾಗಿಯೇ ಈ ಸಿನಿಮಾದಲ್ಲಿನ ಪ್ರಮುಖ ಪಾತ್ರಗಳಿಗೆ ತಕ್ಕ ಕಲಾವಿದರ ಆಯ್ಕೆಯಲ್ಲಿದೆ ‘ಕೆ.ಜಿ.ಎಫ್’ ತಂಡ.

ಈ ಹಿಂದೆ ಸಂಜೂ ಬಾಬಾ ಸಹ ಚಾಪ್ಟರ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿತ್ತು. ನಂತರ ಯಶ್ ಸ್ವತಃ ತಾವೇ ಈ ಸುದ್ದಿ ಬಗ್ಗೆ ಬಾಯಿ ಬಿಟ್ಟರು. ‘ಕೆ.ಜಿ.ಎಫ್’ನ ಎರಡನೇ ಭಾಗದಲ್ಲಿ ಅಭಿನಯಿಸಲು ಸಂಜಯ್ ದತ್ರನ್ನು ಸಂಪರ್ಕಿಸಲಾಗುತ್ತಿದೆ ಎಂದು ಹೇಳಿದ್ದರು. ಆದರೆ ಅವರೂ ಸಹ ಸಂಜಯ್ ಅಭಿನಯಿಸುವ ಕುರಿತು ಖಚಿತ ಮಾಹಿತಿ ನೀಡಿಲಿಲ್ಲ.

ಈಗ ಇದೇ ರೀತಿ ಮತ್ತೊಂದು ಬಾಲಿವುಡ್ನಲ್ಲಿ ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ರವೀನಾ ಕುರಿತಾಗಿ ಒಂದು ಸುದ್ದಿ ಓಡಾಡುತ್ತಿದೆ. ಬಾಲಿವುಡ್ ನಟಿ ರವೀನಾ ಟಂಡನ್ ಈಗ ಕನ್ನಡಕ್ಕೆ ಮತ್ತೆ ಕಾಲಿಡಲಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

ಈ ಹಿಂದೆ ಒಮ್ಮೆ ರಿಯಲ್ ಸ್ಟಾರ್ ಉಪ್ಪಿಗೆ ಜೋಡಿಯಾಗಿ ರವೀನಾ ಅಭಿನಯಿಸಿದ್ದರು. 1999ರಲ್ಲಿ ‘ಉಪೇಂದ್ರ’ ಸಿನಿಮಾಗಾಗಿ ಕನ್ನಡಕ್ಕೆ ಬಂದಿದ್ದರು ರವೀನಾ. ಬರೋಬ್ಬರಿ 20 ವರ್ಷಗಳ ನಂತರ ಈಗ ಮತ್ತೆ ರವೀನಾ ‘ಕೆ.ಜಿ.ಎಫ್- ಚಾಪ್ಟರ್ 2’ ಮೂಲಕ ಕನ್ನಡಕ್ಕೆ ಬರೋ ಸುದ್ದಿ ಓಡಾಡುತ್ತಿದೆ. ಅಲ್ಲದೆ ರವೀನಾ ಅವರ ಮುದ್ದಿನ ಗಂಡ ಅನಿಲ್ ತಡಾನಿ ಹಿಂದಿ ಭಾಷೆಯ ‘ಕೆ.ಜಿ.ಎಫ್’ನ ವಿತರಕ.

‘ಕೆ.ಜಿ.ಎಫ್-ಚಾಪ್ಟರ್ 1’ ಚಿತ್ರದ ಆರಂಭದಲ್ಲಿ ಬರೋದೆ ಪ್ರಧಾನಿ ರಮಿಕಾ ಸೇನ್ ಪಾತ್ರ. ಇದರಲ್ಲಿ ರವೀನಾ ಟಂಡನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ‘ಚಾಪ್ಟರ್ 2’ನಲ್ಲಿ ಈ ಪಾತ್ರಕ್ಕೂ ಮಹತ್ವ ಇರಲಿದ್ದು, ರವೀನಾ ಟಂಡನ್ ಈ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

Facebook Comments

Sri Raghav

Admin