ಬೇಸಿಗೆಯಲ್ಲಿ ಮಣ್ಣಿನ ಮಡಿಕೆ ನೀರು ಕುಡಿಯುವುದರಿಂದ ಏನಾಗುತ್ತೆ..?

ಈ ಸುದ್ದಿಯನ್ನು ಶೇರ್ ಮಾಡಿ

ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಿ ಸೇವಿಸುವುದು ಆರೋಗ್ಯಕ್ಕೂ ಉತ್ತಮವಾಗಿತ್ತು. ಆದರೆ ಬದಲಾದ ಕಾಲದಲ್ಲಿ ಮಣ್ಣಿನ ಪಾತ್ರೆಯ ಬಳಕೆ ಕಡಿಮೆಯಾಗಿ ಸ್ಟೀಲ್, ಅಲ್ಯೂಮಿನಿಯಂ, ಗಾಜು ಬಳಕೆಗೆ ಬಂದಿವೆ.

ಕೆಲವರಿಗೆ ಫ್ರಿಜ್ ನಲ್ಲಿಟ್ಟ ತಂಪು ನೀರು ಕುಡಿದರೆ ಶೀತ ಗ್ಯಾರಂಟಿ. ಬೇಸಿಗೆಯಲ್ಲಿ ಬಾಯಾರಿಕೆಯಾಗುವಾಗ ತಂಪು ನೀರು ಕುಡಿಯಬೇಕೆಂದಾದರೆ ಮಣ್ಣಿನ ಮಡಕೆಯಲ್ಲಿ ನೀರು ತುಂಬಿ ಇಟ್ಟು ಬೇಕಾದಾಗ ಕುಡಿಯಬಹುದು. ಇದು ತಂಪಾಗಿರುತ್ತದೆ.

ಇನ್ನೊಂದು ಬಹು ಮುಖ್ಯ ಲಾಭವೆಂದರೆ  ಮಣ್ಣಿನ ಮಡಕೆಯಲ್ಲಿ ತುಂಬಿದ ನೀರನ್ನು ಕುಡಿದರೆ ಅಸಿಡಿಟಿ, ಗ್ಯಾಸ್ ಸಂಬಂಧಿತ ಖಾಯಿಲೆ ಇರುವವರಿಗೆ ಉತ್ತಮ. ಮಣ್ಣಿನ ಮಡಕೆಯಲ್ಲಿ ಪ್ರಾಕೃತಿಕವಾಗಿ ದೊರಕುವ ಪೋಷಕಾಂಶಗಳು ಇರುವ ಕಾರಣಕ್ಕೆ ಈ ಪಾತ್ರೆಯನ್ನು ನಮ್ಮ ಪೂರ್ವಜರು ಬಳಸುತ್ತಿದ್ದರು.

ಇತ್ತೀಚೆಗಿನ ವರ್ಷಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಹಲವು ಬಗೆಯ ಫಿಲ್ಟರ್ ಗಳು ಬಂದಿರುವುದರಿಂದ ಮಣ್ಣಿನ ಫಿಲ್ಟರ್ ಸೇರಿದಂತೆ ಪಾತ್ರೆಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾಗಿದ್ದರೂ ನೋಡಲು ಆಕರ್ಷಕವಾಗಿದ್ದರೆ ಅಂಥ ವಸ್ತುಗಳನ್ನು ಖರೀದಿಸುವ ಫ್ಯಾಷನ್ಪ್ರಿ ಯರಿದ್ದಾರೆ.

ಇಂತಹವರಿಗಾಗಿಯೇ ವ್ಯಾಪಾರಿಗಳು ಆಕರ್ಷಕ, ಕಲಾತ್ಮಕ ಮಣ್ಣಿನ ಫಿಲ್ಟರ್ಗಳಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. 10ಲೀ, 20ಲೀಟರ್ ನೀರು ತುಂಬುವ ಸಾಮಥ್ರ್ಯ ಹೊಂದಿರುವ ಮಣ್ಣಿನ ಪಾತ್ರೆಗಳು ಇಂದು ಮಾರುಕಟ್ಟೆಯಲ್ಲಿ ಇದೆ.

ನೈಸರ್ಗಿಕವಾಗಿ ಆಗುವ ತಂಪು ನೀರು ಕುಡಿದರೆ ಹದಗೆಡದು ಎಂಬುದು ಮಾತ್ರವಲ್ಲ, ಪ್ಲಾಸ್ಟಿಕ್ ಪಾತ್ರೆಯಲ್ಲಿ ನೀರು ತುಂಬಿಡುವುದರಿಂದ ರಾಸಾಯನಿಕಗಳು ಬಿಡುಗಡೆಯಾಗಿ ಅನಾರೋಗ್ಯಕ್ಕೆ ಕಾರಣವಾಗುವಂತೆ ಮಣ್ಣಿನಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಯಾವುದೇ ಅಂಶಗಳು ಇರುವುದಿಲ್ಲ.

Facebook Comments