ಇದೇ ವಾರ ರಾಜ್ಯಾದ್ಯಂತ ರಿಲೀಸ್ ‘ಗೋಸಿ ಗ್ಯಾಂಗ್’ ಆಗುತ್ತಿದೆ ಚಿತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಯುವ ಪೀಳಿಗೆಯ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸಿದ್ಧಪಡಿಸಿರುವಂತಹ ಗೋಸಿ ಗ್ಯಾಂಗ್ ಚಿತ್ರ ಇದೇ ವಾರ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.ಈ ಚಿತ್ರವನ್ನು ಮೈಸೂರು ಮೂಲದ ಶಿವಕುಮಾರ್ ನಿರ್ಮಿಸಿದ್ದಾರೆ. ಜತೆಗೆ ಇವರ ಪುತ್ರ ಅಜಯ್ ಕಾರ್ತಿಕ್‍ರನ್ನು ಬೆಳ್ಳಿ ಪರದೆಗೆ ನಾಯಕನಾಗಿ ಪರಿಚಯಿಸುತ್ತಿದ್ದಾರೆ. ಹಾಗೆಯೇ ನವರಸ ನಾಯಕ ಜಗ್ಗೇಶ್ ಅವರ ಎರಡನೆ ಪುತ್ರ ಯತಿರಾಜ್ ಜಗ್ಗೇಶ್ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ಚಿತ್ರವನ್ನು ರಾಜು ದೇವಸಂದ್ರ ನಿರ್ದೇಶನ ಮಾಡಿದ್ದು, ಅವರ ಪ್ರಕಾರ, ಈ ಚಿತ್ರವು ಕಾಲೇಜು ಹಾಗೂ ಹಾಸ್ಟೆಲ್ ಜೀವನದ ಸುತ್ತಲೂ ಸುತ್ತಿದರೂ ಕೂಡ ಕಾಮಿಡಿಗೂ ಹೆಚ್ಚು ಒತ್ತು ಕೊಟ್ಟಿದ್ದೇವೆ. ಸುಮಧುರ ಸಂಗೀತವಿರುವ ಈ ಚಿತ್ರದ ಮೂಲಕ ಕಾಲೇಜು ಜೀವನದಲ್ಲಿ ತಪ್ಪು ದಾರಿ ತುಳಿಯದೆ ತಮ್ಮ ಜೀವನವನ್ನು ರೂಪಿಸಿಕೊಳ್ಳಿ ಎಂಬ ಸಂದೇಶವನ್ನು ನೀಡಿರುವುದರ ಜತೆಗೆ ಡ್ರ ಮಾಫಿಯಾದತ್ತಲೂ ಬೆಳಕು ಚೆಲ್ಲಿದ್ದೇವೆ ಎಂದರು.

ನಿರ್ಮಾಪಕ ಶಿವಕುಮಾರ್ ಮಾತನಾಡಿ, ಹರೇ ರಾಮ ಹರೇ ಕೃಷ್ಣ ಚಿತ್ರದ ನಂತರ ನಮ್ಮ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಮೂಲಕ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನನ್ನ ಪುತ್ರ ಅಜಯ್ ಕಾರ್ತಿಕ್ ಹಾಗೂ ಯತಿರಾಜ್ ಜಗ್ಗೇಶ್ ಅವರು ಕಾಣಿಸಿಕೊಂಡಿದ್ದಾರೆ.

ಕಾಲೇಜ್ ಕ್ಯಾಂಪಸ್‍ನಲ್ಲಿ  ಹಾವಳಿ ಇರುವುದು ತಿಳಿದಿರುವ ವಿಚಾರವೇ. ಇದನ್ನು ಹೇಗಾದರೂ ತಡೆಯಬೇಕು. ವಿದ್ಯಾರ್ಥಿಗಳ ಬದುಕು ಉಜ್ವಲವಾಗಬೇಕು ಎಂಬ ಮಹದಾಸೆಯನ್ನಿಟ್ಟುಕೊಂಡು ಈ ಚಿತ್ರದ ಮೂಲಕ ತೋರಿಸಲು ಹೊರಟಿದ್ದೇವೆ. ಪರದೇಶದವರು ತಮ್ಮ ಸಂಸ್ಕøತಿಯನ್ನು ನಮ್ಮ ದೇಶದ ಮೇಲೆ ಹೇರುತ್ತಿದ್ದು, ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆಯೂ ಬೆಳಕು ಚೆಲ್ಲಿದ್ದೇವೆ ಎಂದರು.

ನಾಯಕ ಅಜಯ್ ಕಾರ್ತಿಕ್ ಮಾತನಾಡಿ, ಯತಿರಾಜ್ ಅವರು ನನಗೆ ತುಂಬಾ ಸಪೋರ್ಟ್ ಮಾಡಿದ್ದಲ್ಲದೆ ಅಭಿನಯದ ಬಗ್ಗೆ ಕೆಲವು ಟಿ ನೀಡಿದರು. ಯುವ ಜನತೆಯ ಅಮಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುವುದನ್ನು ನಾವು ಈ ಚಿತ್ರದಲ್ಲಿ ಹೇಳಲು ಹೊರಟಿದ್ದೇವೆ ಎಂದರು.

ಕೆ.ಕಲ್ಯಾಣ್ ಮೂರು ಮತ್ತು ರಾಜುದೇವಸಂದ್ರ ಸಾಹಿತ್ಯದ ಒಟ್ಟು ನಾಲ್ಕು ಹಾಡುಗಳಿಗೆ ಹಂಸಲೇಖಾ ಶಿಷ್ಯ ಆರವ್ ಕೌಶಿಕ್ ಸಂಗೀತ ಒದಗಿಸಿದ್ದಾರೆ. ಅನುಷಾ ರೈ, ಮೋನಿಕಾ, ಮತ್ತು ಸೋನುಪಾಟೀಲ್ ನಾಯಕಿಯರು. ತಾರಗಣದಲ್ಲಿ ರೋಹಿತ್, ಬ್ಯಾಂಕ್ ಜನಾರ್ಧನ್, ಖಳ ನಟನಾಗಿ ಅಪ್ಪು ವೆಂಕಟೇಶ್, ಬಿರಾದಾರ್, ಮೈಕೆಲ್ ಮಧು, ಸುಚಿತ್ರಾ, ಕಾವ್ಯ ಪ್ರಕಾಶ್, ಅನ್ನಪೂರ್ಣ, ಗಿರೀಶ್ ಮುಂತಾದವರು ನಟಿಸಿದ್ದಾರೆ. ಹಾಲೇಶ್ ಛಾಯಾಗ್ರಹಣ, ಕುಮಾರ್ ಸಂಕಲನವಿರುವ ಈ ಚಿತ್ರ ಅದ್ಧೂರಿ ಪ್ರಚಾರದ ಮೂಲಕ ಬೆಳ್ಳಿ ಪರದೆ ಮೇಲೆ ರಾರಾಜಿಸಲು ಸಿದ್ಧವಾಗಿದೆ.

gang

Facebook Comments