ನಾಳೆ ತೆರೆ ಮೇಲೆ ‘ಒಂದ್ ಕಥೆ ಹೇಳ್ಲಾ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ಹಾರರ್, ಥ್ರಿಲ್ಲರ್ ಇರುವ ಆ್ಯಂತಾಲಜಿ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಗಿರೀಶ್ ಜಿ. ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಐದು ಜನ ಸ್ನೇಹಿತರ ಟ್ರಾವೆಲ್‍ನಿಂದ ಆರಂಭವಾಗುವ ಕಥೆ ಮುಂದೆ ಸಾಗುತ್ತಾ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತದೆ.

ಒಟ್ಟು 4 ಉಪಕಥೆಗಳು ಈ ಚಿತ್ರದಲ್ಲಿದ್ದು, ಎಲ್ಲಾ ಕಥೆಗಳು ಹಾರರ್ ಜಾನರ್‍ನಲ್ಲಿರುತ್ತವೆ.  ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಗಿರೀಶ್ ಈ ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡುತ್ತ ಈಗಿನ ಪ್ರೇಕ್ಷಕರು ಹೆಚ್ಚಾಗಿ ಹಾರರ್ ಕಥೆಗಳನ್ನು ಇಷ್ಟಪಡುತ್ತಾರೆ.

ಇನ್ನು ಒಂದ್ ಕಥೆ ಹೇಳ್ಲಾ ಚಿತ್ರದ ಕಥೆಯ ಕುರಿತಂತೆ ಹೇಳುವುದಾದರೆ ಮೂವರು ಹುಡುಗರು, ಇಬ್ಬರು ಯುವತಿಯರು ಬೆಂಗಳೂರಿನಿಂದ ಸಕಲೇಶಪುರಕ್ಕೆ ಪ್ರಯಾಣ ಬೆಳೆಸುವಾಗ ಅವರುಗಳಲ್ಲೆ ಒಂದೊಂದು ಕಥೆಗಳು ಹುಟ್ಟಿಕೊಳ್ಳುತ್ತದೆ. ಅದರಲ್ಲಿ ಶೇ.60ರಷ್ಟು ಹಾರರ್ ಅಂಶಗಳು ಬರುತ್ತವೆ. ಅವರೆಲ್ಲ ಒಂದು ಸ್ಟೇ ಹೋಮ್ ತಲುಪಿದಾಗ ಕಥೆ ಅನೇಕ ಟ್ವಿಸ್ಟ್ ಪಡೆಯುತ್ತದೆ.

ಹೋಂ ಸ್ಟೇನಲ್ಲಿ ನಡೆದ ಪ್ರಕರಣಗಳ ಪ್ರೇರಣೆಯಿಂದ ಈ ಚಿತ್ರದ ಕಥೆಯನ್ನು ಬರೆಯಲಾಗಿದೆ. ಸಕಲೇಶಪುರ, ರಾಮನಗರ, ಕುಣಿಗಲ್ ಸೇರಿದಂತೆ ಹಲವಾರು ಲೊಕೇಶನ್‍ಗಳಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಬಹುಮುಖ್ಯವಾಗಿ ಈ ಚಿತ್ರದಲ್ಲಿ ಕೋಳಿಯೊಂದು ಬಹು ಮುಖ್ಯ ಪಾತ್ರ ನಿರ್ವಹಿಸಿದ್ದು ಅದು ಏನು ಎಂಬುದನ್ನು ಹೇಳಲು ಆಗುವುದಿಲ್ಲ. ತೆರೆಮೇಲೆ ನೋಡಿದರೇ ಚೆನ್ನ ಎಂದು ಹೇಳಿದರು.

ಚಿತ್ರದ ಸಂಕಲನ ಮಾಡುವುದರೊಂದಿಗೆ ನಾಯಕನಾಗಿಯೂ ಕಾಣಿಸಿಕೊಂಡಿರುವ ಪ್ರತೀಕ್, ನಾಯಕಿ ಪ್ರಣತಿ. ಆರ್.ಗಾಡಿಗ ಉಳಿದಂತೆ ದೀಪಕ್ ತಮ್ಮ ಪಾತ್ರದ ಕುರಿತಂತೆ ಚುರುಕಾಗಿ ಹೇಳಿಕೊಂಡರು. ಚಿತ್ರಕ್ಕೆ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿರುವ ಸೌಮ್ಯಾ ಮತ್ತು ರಮಾಕಾಂತ್ ರಿಯಲ್ ದಂಪತಿಗಳಾಗಿದ್ದು, ಚಿತ್ರದಲ್ಲಿ ಕೂಡ ದಂಪತಿಗಳಾಗಿಯೇ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಜೋಡಿ ಹಕ್ಕಿ ಧಾರವಾಹಿ ಖ್ಯಾತಿಯ ತಾಂಡವ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಕ್ರೌಡ್ ಫಂಡಿಂಗ್ ಮೂಲಕ ಸುಮಾರು 20 ಜನ ಸ್ನೇಹಿತರು ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅದರಲ್ಲಿ ಮೂವರು ನಿರ್ಮಾಪಕರು ಮಾತ್ರವೇ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು. ಚಿತ್ರವನ್ನು ವಿತರಣೆ ಮಾಡುತ್ತಿರುವ ದೀಪಕ್ ಗಂಗಾಧರ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು. ಎಲ್ಲ ಯುವ ಪಡೆ ಸೇರಿಕೊಂಡು ನಿರ್ಮಿಸಿರುವ ಒಂದ್ ಕಥೆ ಹೇಳ್ಲಾ ಚಿತ್ರವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕು.

1

Facebook Comments