ಹುಲಿನ ಬಣವೆ-ಟೈರ್ ಗಾಡಿಗಳಿಗೆ ಬೆಂಕಿ ತಗುಲಿ ಅಪಾರ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

ಚಳ್ಳಕೆರೆ,ಮಾ.8- ದನದ ಕೊಟ್ಟಿಗೆ ಸೇರಿದಂತೆ ನಾಲ್ಕು ಹುಲ್ಲಿನ ಬಣವೆ, ಎರಡು ಟೈರ್ ಗಾಡಿಗಳಿಗೆ ಆಕಸ್ಮಿಕ ಬೆಂಕಿ ಬಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿರುವ ಘಟನೆ ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಚಿಕ್ಕಹಳ್ಳಿಯಲ್ಲಿ ನಾಗರಾಜ ಮತ್ತು ಓಂಕಾರಪ್ಪ ಅವರಿಗೆ ಸೇರಿದ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು ಅದರಲ್ಲಿದ್ದ ಸಾವಿರಾರು ರೂ. ಮೌಲ್ಯದ ಮರಮುಟ್ಟುಗಳು ಬೆಂಕಿಗೆ ಅಹುತಿಯಾಗಿವೆ.

ಪಕ್ಕದಲ್ಲೇ ಇದ್ದ ನಾಲ್ಕು ಬೃಹತ್ ಹುಲ್ಲಿನ ಬಣವೆಗಳು ಸುಟ್ಟು ಬೂದಿಯಾಗಿವೆ. ಇದರೊಂದಿಗೆ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಎರಡು ಟೈರ್ ಗಾಡಿಗಳಿಗೂ ಬೆಂಕಿ ಆವರಿಸಿದ್ದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ರಾತ್ರಿ 8 ಗಂಟೆ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಕಿ ಅವಘಡಕ್ಕೆ ತೋಟಗಾರಿಕೆ ಇಲಾಖೆಯಿಂದ ಸಿಗುವ ಪರಿಹಾರವನ್ನು ದೊರಕಿಸಿ ಕೊಡುವುದಾಗಿ ತಹಸೀಲ್ದಾರ್ ತುಷಾರ್ ಹೊಸೂರ್ ಭರವಸೆ ನೀಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )