ರೋಗನಿರೋಧಕ ಹೆಚ್ಚಿಸುವ ಕಿವಿಹಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

ಕಿವಿಹಣ್ಣು ಉತ್ತಮ ಪ್ರಮಾಣದಲ್ಲಿ ನಾರಿನಂಶವನ್ನು ಹೊಂದಿದ್ದು, ಅನೇಕ ತೊಂದರೆಗಳಿಂದ ರಕ್ಷಿಸುವಲ್ಲಿ ಅನುಕೂಲಕಾರಿ ಯಾಗಲಿದೆ. ನೋಡಲು ಎಷ್ಟು ಡಿಫರೆಂಟ್ ಆಗಿದೆಯೋ ರುಚಿಯಲ್ಲೂ ಕೂಡ ವಿಭಿನ್ನ ಕಿವಿಹಣ್ಣು ಕಿವಿ ಹಣ್ಣಿನಲ್ಲಿ ಪೊಟಾಷಿಯಂ ಅಂಶ ಜಾಸ್ತಿ ಇದೆ ಹೃದಯಸಂಬಂಧಿತ ಸಮಸ್ಯೆಗಳ ನಿಯಂತ್ರಣಕ್ಕೆ ಸಹಕಾರಿ. ರಕ್ತದಲ್ಲಿ ಕೊಲೆಸ್ಟರಾಲ್ ಕಡಿಮೆ ಮಾಡಲು, ಮಲಬದ್ಧತೆಯಿಂದ ಕಾಪಾಡಲು ಇದು ಉತ್ತಮ. ಜೀರ್ಣಕ್ರಿಯೆಗೆ ಸಹಕರಿಸುತ್ತದೆ.

ಕಿವಿಹಣ್ಣು ಎಕ್ಟಿನಿಡೇನ್ ಎಂಬ ಎಂಝೈಮ್ ಹೊಂದಿದ್ದು, ಅದು ಪ್ರೋಟೀನ್ನ್ನು ಕರಗಿಸಲು ಸಹಕರಿಸುವ ಗುಣವಾಗಿದೆ.. ಉತ್ತಮ ಪ್ರಮಾಣದಲ್ಲಿ ಫೋಲೇಟ್ನ್ನು ಹೊಂದಿದೆ. ಇದು ಗರ್ಭಿಣಿಯರಿಗೆ ತುಂಬ ಒಳ್ಳೆಯದು. ಮಗುವಿನ ಬೆಳವಣಿಗೆಗೆ ಸಹಕರಿಸುವಂತಹ ಪೋಷಕಾಂಶ ಇದಾಗಿದೆ. ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಬಿ12, ಪೊಟ್ಯಾಷಿಯಂ, ಕ್ಯಾಲ್ಶಿಯಂ, ಕಬ್ಬಿಣ ಪೋಷಕಾಂಶಗಳು ಕಿವಿಹಣ್ಣಿನಲ್ಲಿದೆ.

ಆದುದರಿಂದ ದೇಹದ ಅನೇಕ ಕ್ರಿಯೆಗಳು ಸರಾಗವಾಗಿ ನಡೆಯಲು ಈ ಹಣ್ಣಿನ ಸೇವನೆ ಪೂರಕವಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು, ನರಸಂಬಂಧಿತ ಹಾಗೂ ಮಾಂಸಖಂಡ ಸಂಬಂಧಿತ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಸಾಗಲು ಕಿವಿಹಣ್ಣು ಸಹಾಯ ಮಾಡುತ್ತದೆ. ಇನ್ನು ಡೆಂಘೀ ಜ್ವರದಿಂದ ಬಳಲುತ್ತಿರುವವರು ಪ್ರತಿದಿನ ಕಿವಿಹಣ್ಣನ್ನು ತಿಂದರೆ ರಕ್ತಕಣವನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ಡೆಂಘೀ ಸೋಂಕಿಗೆ ರಾಮಭಾಣವಾಗಿದೆ.

ಹಿಮಾಚಲ ಪ್ರದೇಶದಲ್ಲಿ ಇದರ ಕೃಷಿ ಅತ್ಯಂತ ಯಶಸ್ವಿಯಾಗಿದ್ದು ಜಮ್ಮು-ಕಾಶ್ಮೀರಕ್ಕೂ ಕಾಲಿರಿಸಿದೆ. ಮಾರುಕಟ್ಟೆಯಲ್ಲಿ ತುಂಬ ಬೇಡಿಕೆಯಿದೆ ಈ ಹಣ್ಣಿಗೆ. ಚರ್ಮದ ಆರೋಗ್ಯಕ್ಕೆ ಈ ಹಣ್ಣು ಉತ್ತಮ. ಅಲ್ಕಲೈನ್ ಗುಣವನ್ನು ಸಹ ಹೊಂದಿರುತ್ತದೆ.

ಜೊತೆಯಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಇ ಜೊತೆಯಾಗಿರುವುದರಿಂದ ಚರ್ಮಕ್ಕೆ ಬೇಕಾದ ಪೋಷಕಾಂಶಗಳು ಇದರ ಸೇವನೆಯಿಂದ ನೈಸರ್ಗಿಕವಾಗಿ ದೊರೆಯುತ್ತದೆ. ಚರ್ಮವು ಸುಕ್ಕುಗಟ್ಟದಂತೆ, ಆಂತರ್ಯದಿಂದ ಹೊಳಪಾಗಿರಲು ಸಹಾಯ ಮಾಡುತ್ತದೆ.

ಕಿವಿ ಹಣ್ಣಿನಲ್ಲಿ ಇತರ ಹಣ್ಣಿನಲ್ಲಿರುವುದಕ್ಕಿಂತ ಅಧಿಕ ಪ್ರಮಾಣದಲ್ಲಿ ಫಾಲಿಕ್ ಆಸಿಡ್ ಇರುವುದರಿಂದ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಇದನ್ನು ತಿನ್ನುವುದು ಒಳ್ಳೆಯದು. ಕಿವಿ ಹಣ್ಣಿನಲ್ಲಿರುವ ಸತು ಪುರುಷರಲ್ಲಿರುವ ಹಾರ್ಮೋನ್ ಟೆಸ್ಟೋಸ್ಟಿರೋನ್ ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ. ಕಿವಿ ಹಣ್ಣು ರುಚಿ ಮಾತ್ರವಲ್ಲ ಅನೇಕ ಆರೋಗ್ಯಕರ ಗುಣವನ್ನು ಹೊಂದಿದೆ. ಈ ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ, ಫುಡ್ ಬಜಾರ್ ಗಳಲ್ಲಿ ದೊರೆಯುತ್ತದೆ.

Facebook Comments