‘ಮರ್ಡರ್ ಮಾಡೋಕೆ ನಾನೇನು ಕೋಳಿನಾ..ಕುರಿನಾ..?’ : ರಾಕಿಂಗ್ ಸ್ಟಾರ್ ಯಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಮಾ. 09 : ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ಸುದ್ದಿಗಳು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ಈ ಕುರಿತಂತ ಸ್ಪಷ್ಟನೆ  ನೀಡಲು ಯಶ್ ಇಂದು ದಿಢೀರ್ ಸುದ್ದಿಘೋಷ್ಠಿ ನಡೆಸಿದರು.

ಇನ್ನು ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಪದೇ ಪದೇ ಸುದ್ದಿಯಾಗುತ್ತಿದೆ. ಈ ರೀತಿಯ ಸುದ್ದಿಗಳಿಂದ ನಮ್ಮ ಕುಟುಂಬಸ್ಥರಿಗೆ ಆತಂಕವುಂಟಾಗುತ್ತಿದೆ. ಕಲಾವಿದರ ಜೀವನದಲ್ಲಿ ಇಂತಹ ಸಂಗತಿಗಳೂ ನಡೆಯುತ್ತಿರುತ್ತವೆ. ನನ್ನನ್ನು ಯಾರೂ, ಏನೂ ಮಾಡಲು ಸಾಧ್ಯವಿಲ್ಲ ಎಂದು ಅಂತ ಹೇಳಿದರು.

”ನಾನೇನು ಕೋಳಿನಾ…..ಕುರಿನಾ….ಯಾರೋ ಬಂದು ಕೊಲೆ ಮಾಡೋದಕ್ಕೆ. ನಾನೇನು, ನನ್ನ ಶಕ್ತಿ ಅಂತ ನನಗೆ ಗೊತ್ತಿದೆ. ಬೇರೆಯವರಿಗೂ ಗೊತ್ತಾಗಲಿ ಅಂತಾನೇ ನಾನು ನಿಮ್ಮ ಮುಂದೆ ಬಂದಿದ್ದೀನಿ. ಆದ್ರೆ, ಆ ರೀತಿ ಯಾವುದೇ ಘಟನೆ ನಡೆದಿಲ್ಲ. ಇದೆಲ್ಲ ಎಲ್ಲಿಂದ ಆರಂಭವಾಗಿದೆ, ಹೇಗೆ ಹರಡುತ್ತಿದೆ ಎಂಬುದು ಗೊತ್ತಿಲ್ಲ. ದಯವಿಟ್ಟು ಯಾರೂ ಇಂತಹ ಸುದ್ದಿಗಳಿಗೆ ಕಿವಿಕೊಡಬೇಡಿ” ಎಂದು ಯಶ್ ಹೇಳಿದರು.

ಸುಪಾರಿ ಕೇಸ್ನ ಎಫ್ಐಆರ್ನಲ್ಲಿ ನನ್ನ ಹೆಸರಿಲ್ಲ. ಎಫ್ಐಆರ್ನಲ್ಲಿ ಕೇವಲ ಹೀರೋ ಎಂದು ನಮೂದಿಸಲಾಗಿದೆ. ಪೊಲೀಸರೂ ನನ್ನ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿದ್ದಾವೆ ಅಂತ ಯಶ್ ಹೇಳಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ಸುದ್ದಿಗಳು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ರೌಡಿ ಶೀಟರ್ ಭರತನನ್ನು ಮಾರ್ಚ್ 7 ರಂದು ಪೊಲೀಸರು ಬಂಧಿಸಿದ್ದರು.

ವಿಚಾರಣೆ ವೇಳೆ ಸ್ಯಾಂಡಲ್ ವುಡ್ ನಟನೊಬ್ಬನ ಹತ್ಯೆಗೆ ಸ್ಕೆಚ್ ಹಾಕಿದ್ದರ ಬಗ್ಗೆ ಮಾಹಿತಿ ಸಿಕ್ಕಿದೆ ಎಂಬ ಆಧಾರದ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲು ಮಾಡಿ ವಿಚಾರಣೆ ನಡೆಸುತ್ತಿದ್ದರು ಎನ್ನಲಾಗಿದೆ.  ಈ ಎಲ್ಲದಕ್ಕೂ ಇಂದು ಯಶ್ ಸ್ಪಷ್ಟನೆ ದೀಡುವ ಮೂಲಕ್ ಎಲ್ಲ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

Facebook Comments

Sri Raghav

Admin