ಬಿಗ್ ಬ್ರೇಕಿಂಗ್ : ಇಥಿಯೋಪಿಯನ್ ಏರ್‌ಲೈನ್ಸ್‌ ವಿಮಾನ ಪತನ, 157 ಜನ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನೈರೋಬಿ,ಮಾ.10- ತಾಂತ್ರಿಕ ದೋಷದಿಂದ ವಿಮಾನವೊಂದು ಸ್ಪೋಟಗೊಂಡು 149 ಮಂದಿ ಪ್ರಯಾಣಿಕರು, 8 ಮಂದಿ ಪೈಲೆಟ್‍ಗಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿರುವ ಘಟನೆ ಕೀನ್ಯಾ ರಾಜಧಾನಿ ನೈರೋಬಿಯಲ್ಲಿ ಸಂಭವಿಸಿದೆ.

ಇಥೋಪಿಯನ್ ಏರ್‍ಲೈನ್ ಸಂಸ್ಥೆಗೆ ಸೇರಿದ ಈ ವಿಮಾನ ಬೆಳಗ್ಗೆ 8.44ಕ್ಕೆ ಕೀನ್ಯಾ ರಾಜಧಾನಿ ನೈರೋಬಿಗೆ ಹೊರಟ್ಟಿತ್ತು. ಹೊರಟ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.

ಸ್ಪೋಟಕ್ಕೆ 149 ಪ್ರಯಾಣಿಕರು ಹಾಗೂ ಎಂಟು ಮಂದಿ ಪೈಲೆಟ್‍ಗಳು ಸಾವನ್ನಪ್ಪಿದ್ದಾರೆ ಎಂದು ಇಥೋಪಿಯಾ ಏರ್‍ಲೈನ್ ಸಂಸ್ಥೆಯ ವಕ್ತಾರರೊಬ್ಬರು ಖಚಿತಪಡಿಸಿದ್ದಾರೆ.

ವಿಮಾನ ಸ್ಫೋಟಗೊಂಡು ಪ್ರಯಾಣಿಕರು ಮತ್ತು ಪೈಲೆಟ್‍ಗಳು ಸಾವನ್ನಪ್ಪಿದ್ದಾರೆ ಎಂಬ ವಿಷಯವನ್ನು ಹೇಳಲು ನನಗೆ ಅತೀವ ದುಃಖವಾಗುತ್ತಿದೆ. ಆದರೆ ನನ್ನ ಹೆಸರನ್ನು ಮಾತ್ರ ಬಹಿರಂಗಪಡಿಸುವುದಿಲ್ಲ ಎಂದು ವಕ್ತಾರರು ಹೇಳಿದ್ದಾರೆ.

ಇಥೋಪಿಯಾದ ಪ್ರಧಾನಿ ತಮ್ಮ ಟ್ವಿಟರ್‍ನಲ್ಲಿ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ವಿಮಾನ ಹೇಗೆ ಸ್ಫೋಟಗೊಂಡಿತು, ಎಲ್ಲಿ, ಯಾವಾಗ, ಕಾರಣ ಏನೆಂಬುದನ್ನು ಬಹಿರಂಗಪಡಿಸಿಲ್ಲ. ಈ ದುರಂತಕ್ಕೆ ಇಥೋಪಿಯಾ ಜನತೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಇಥೋಪಿಯಾ ಏರ್‍ಲೈನ್ಸ್ ಬೋಯಿಂಗ್ 737 ವಿಮಾನ ನೈರೋಬಿಗೆ ಹೊರಟ ವೇಳೆ ಸ್ಫೋಟಗೊಂಡಿದೆ.  ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡು ಆಘಾತಗೊಳಗಾದವರ ಕುಟುಂಬದಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. – ಈ ಸಂಜೆ ವರದಿ

Facebook Comments

Sri Raghav

Admin