1930ರ ಡಕೋಟಾ ವಿಮಾನ ಪತನವಾಗಿ ಮೇಯರ್ ಸೇರಿ 12 ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಲೊಂಬಿಯಾ,ಮಾ.11- ಅಮೆರಿಕನ್ ನಿರ್ಮಿತ ಅವಳಿ ಎಂಜಿನ್‍ಗಳ ಹಳೆವಿಮಾನ ಪತನವಾಗಿದ್ದು ಮೇಯರ್ ಕುಟುಂಬ ಸೇರಿ 12 ಜನರ ಸಾವನ್ನಪ್ಪಿರುವ ಘಟನೆ ಕೊಲೊಂಬಿಯಾದಲ್ಲಿ ಸಂಭವಿಸಿದೆ.

1930ರ ದಶಕದಲ್ಲಿ ಮೊದಲ ಬಾರಿಗೆ ಉತ್ಪಾದಿಸಲ್ಪಟ್ಟ ಅಮೆರಿಕನ್ ನಿರ್ಮಿಸಿ ಅವಳಿ ಎಂಜಿನ್ ಪ್ರೊಪೆಲ್ಲರ್ ಪ್ಲೇನ್ ಡೌಗ್ಲಾನ್ -3 ವಿಮಾನವು ಸ್ಯಾನ್ ಜೋಸ್ ಡೆಲ್ ಗುವಿಯಾರೆ ಮತ್ತು ವಿಲ್ಲವಿಸೆನ್ಸಿಯೊ ನಗರಗಳ ನಡುವೆ ಪತನಗೊಂಡಿದೆ.

ವಿಮಾನದಲ್ಲಿ ತರೈರಾ ಮುನಿಸಿಪಾಲಿಟಿ ಮೇಯರ್ ಡೊರಿಸ್ ವಿಲೆಗಾಸ್, ಆಕೆಯ ಪತಿ ಮತ್ತು ಮಗಳು, ವಿಮಾನದ ಮಾಲೀಕರು, ಪೈಲಟ್ ಜೈಮ್ ಕಾರಿಲ್ಲೋ, ಕೋ-ಪೈಲಟ್ ಜೈಮ್ ಹೆರೆರಾ ಮತ್ತು ಟೆಕ್ನಿಷನ್ ಸೇರಿ 12 ಜನ ಮೃತ ಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.

ವಿಮಾನ ಹಾರುತ್ತಿರುವಾಗ ಎಂಜಿನ್ ವೈಫಲ್ಯದಿಂದಾಗಿ ಪೈಲಟ್ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅದು ವಿಫಲವಾಗಿದ್ದರಿಂದ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Facebook Comments

Sri Raghav

Admin