‘ಸ್ಮಾರ್ಟ್’ಆಯ್ತು ಎಜುಕೇಷನ್, ಡಿಜಿಟಲೀಕರಣವಾಯ್ತು ವಿದ್ಯಾರ್ಥಿಗಳ ಕಲಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

“ನಾವು ಬಯಸಿದರೆ ತಂತ್ರಜ್ಞಾನವನ್ನು ‘ರೆಕ್ಕೆ’ ಗಳಾಗಿ ಬಳಸಬಹುದು. ತಂತ್ರಜ್ಞಾನದ ಸಹಾಯದಿಂದ ಶೈಕ್ಷಣಿಕ ಪ್ರಪಂಚವು ಹಿಂದೆಂದಿಗಿಂತ ವೇಗವಾಗಿ ಮತ್ತು ಅತಿ ದೂರ ಹಾರಲು ಸಶಕ್ತವಾಗಲಿದೆ.” – ಜೆನ್ನಿ ಆರ್ಲೆಜ್ (ಅಮೆರಿಕದ ಶಿಕ್ಷಣ ತಜ್ಞರು)

“ತಂತ್ರಜ್ಞಾನದ ಪರಿಮಿತಿ” ಎನ್ನುವ ಶಬ್ದವನ್ನೇ ಅರಿಯದ ನಾವು 21 ನೇ ಶತಮಾನದತ್ತ ದಾಪುಗಾಲಿಡುತ್ತಿದ್ದೇವೆ. ತಂತ್ರಜ್ಞಾನದ ಶ್ರೀಮಂತ ಅಭಿವೃದ್ಧಿಯ ಹಂತದಲ್ಲಿರುವ ಜಗತ್ತು, ಪ್ರತಿಯೊಂದು ಕಾರ್ಯ ಕ್ಷೇತ್ರದಲ್ಲೂ ತಂತ್ರಜ್ಞಾನವನ್ನು ತನ್ನದಾಗಿಸಿಕೊಂಡಿದೆ. ನಿಧಾನವಾಗಿ ಸಾರ್ವಭೌಮತ್ವವನ್ನು ಕೂಡ ಪಡೆದುಕೊಳ್ಳುತ್ತಿದೆ. ಪ್ರತಿ ವ್ಯಕ್ತಿಯ ಜೀವನದಲ್ಲಿ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಟ್ಯಾಬ್ಲೆಟ್, ERP, IoT ಯಂತಹ ಪದಗಳು ಇಂದು ಅಜ್ಞಾತ ಪದಗಳಾಗಿ ಉಳಿದಿಲ್ಲ.

“ಡಿಜಿಟೈಸೇಷನ್ ಎನ್ನುವುದು ಡಿಜಿಟಲ್ ಟೆಕ್ನಾಲಜೀಸ್ ಬಳಸಿಕೊಂಡು ದಿನನಿತ್ಯದ ಜೀವನದ ಅಂಗವಾಗಿಸುವ ಮೂಲಕ ಡಿಜಿಟೈಸ್ ಮಾಡಲು ಸಾಧ್ಯವಿರುವ ಪ್ರತಿಯೊಂದು ಪರಿಕರಗಳ ಡಿಜಿಟೈಸೇಷನ್ ಆಗಿದೆ”

ಹೌದು! “ಡಿಜಿಟೈಸೇಷನ್ ಮತ್ತು ತಂತ್ರಜ್ಞಾನ” 21ನೇ ಶತಮಾನವನ್ನು ನಿಖರವಾದ ರೀತಿಯಲ್ಲಿ ವಿವರಿಸುವ ಪದಗಳಾಗಿವೆ. ಇವುಗಳನ್ನು ಬಳಸಿಕೊಂಡು ಶಿಕ್ಷಣ ಕ್ಷೇತ್ರದಲ್ಲೂ ಅಭೂತಪೂರ್ವವಾದ ಬೆಳವಣಿಗೆಗಳು ಬೆಳಕಿಗೆ ಬರುತ್ತಿರುವ ಯುಗವಾಗಿದೆ. ಯಾವುದೇ ಶಿಕ್ಷಣ ಸಂಸ್ಥೆಗಳು ತಂತ್ರಜ್ಞಾನದ ವಿಷಯದಲ್ಲಿ ಹಿಂದುಳಿದರೆ ಈ ನಾಗಾಲೋಟದಲ್ಲಿ ಇತರರೊಂದಿಗೆ ಹೊಂದಾಣಿಕೆಯಾಗದೆ, ಇರುವ ಪ್ರಗತಿಯನ್ನೂ ಮರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

“ನಾಗಾಲೋಟ, ಸ್ಪರ್ಧೆ, ತಂತ್ರಜ್ಞಾನ” ಇಂತಹ ಪದಗಳು ಶಿಕ್ಷಣ ಸಂಸ್ಥೆಗಳನ್ನು ಆತಂಕದ ತುದಿಗಾಲಿನಲ್ಲಿ ನಿಲ್ಲಿಸಿವೆ. ಈ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮಾರುಕಟ್ಟೆಯನ್ನು ಅಧ್ಯಯನ ಮಾಡಿದಾಗ ಹಲವು ಆಶ್ಚರ್ಯಕರ ಸಂಗತಿಗಳು ಗಮನಕ್ಕೆ ಬಂದವು.

ಮಾರುಕಟ್ಟೆಯಲ್ಲಿ “ಶಿಕ್ಷಣ ಸಂಸ್ಥೆಗಳು ಮತ್ತು ತಂತ್ರಜ್ಞಾನ ಪ್ರೇರಿತ ಶೈಕ್ಷಣಿಕ ನಿರ್ವಹಣಾ ವ್ಯವಸ್ಥೆ” ಎನ್ನುವ ಅಧ್ಯಯನಾತ್ಮಕ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅದರ ಮೇಲೆ ಕೆಲಸ ಮಾಡುವ ಗೋಜಿಗೆ ಯಾವುದೇ ದೈತ್ಯ ತಂತ್ರಜ್ಞಾನ ಸಂಸ್ಥೆಗಳು ಮುನ್ನಡಿಯಿಟ್ಟಿಲ್ಲ. ಹತ್ತಾರು ಏಕ ವ್ಯಕ್ತಿ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ ಅವರಲ್ಲಿ ಸಮರ್ಪಣೆ, ಪರಿಶ್ರಮ, ಸ್ಥಿರತೆ, ಸ್ವಯಂ ಶಿಸ್ತು, ಸಮಗ್ರತೆ, ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯಗಳ ಕೊರತೆ ಎದ್ದು ಕಾಣುತ್ತಿತ್ತು.

ಈ ನಿಟ್ಟಿನಲ್ಲಿ ಕಾರ್ಯನಿರತವಾದ ಬೆಂಗಳೂರಿನಿಂದ ಕಾರ್ಯಾಚರಿಸುತ್ತಿರುವ “ಈರೆಲೆಗೋ ಡಿಜಿ ಮೀಡಿಯಾ ಪ್ರೈವೇಟ್ ಲಿಮಿಟೆಡ್” (eReleGo Digi Media Pvt Ltd) ಸಂಸ್ಥೆಯು ತನ್ನ ಸ್ಥಾನಿಕ ಉತ್ಪನ್ನವಾದ ”ಈಜೀನಿಯಸ್ ಕ್ಯಾಂಪಸ್ ಮತ್ತು ಶೈಕ್ಷಣಿಕ ಯಾಂತ್ರೀಕೃತ ವ್ಯವಸ್ಥೆ” (eGenius Campus & Academic Automation System) ಹೆಸರಿನ ಸಾಪ್ಟ್ ವೇರ್ ತಂತ್ರಜ್ಞಾನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕರ್ನಾಟಕದಲ್ಲಿ ಕೇವಲ ಆರು ತಿಂಗಳಲ್ಲಿ ಸುಮಾರು ಇಪ್ಪತ್ತು ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಚಕ್ರ ನಿರ್ವಹಣಾ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟೈಸೇಷನ್ ಮಾಡಿರುವ ಹೆಗ್ಗಳಿಕೆಯಿದ್ದು ತನ್ನ ಜಾಲವನ್ನು ತಮಿಳುನಾಡು, ಆಂಧ್ರ ಪ್ರದೇಶ ಮತ್ತು ದಕ್ಷಿಣ ಆಫ್ರಿಕ ದೇಶಗಳಿಗೆ ಹರಡಿದ್ದು ಇನ್ನೆರಡು ವರ್ಷಗಳಲ್ಲಿ ಕನಿಷ್ಠ ಐವತ್ತು ಲಕ್ಷ ವಿದ್ಯಾರ್ಥಿಗಳ ವಿದ್ಯಾರ್ಥಿ ಜೀವನ ಚಕ್ರ ನಿರ್ವಹಣಾ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟೈಸೇಷನ್ ಮಾಡುವ ಗುರಿ ಹೊಂದಿದೆ.

ತಂತ್ರಜ್ಞಾನ ಮತ್ತು ವಿದ್ಯಾರ್ಥಿ ಜೀವನ ಚಕ್ರ ನಿರ್ವಹಣಾ ವ್ಯವಸ್ಥೆಯ ಅಗತ್ಯ ಮತ್ತು ವಿಶೇಷತೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಹತ್ತು ಹಲವು ಆಸಕ್ತಿದಾಯಕ ಮಾಡ್ಯೂಲ್ ಗಳನ್ನು ಅಭಿವೃದ್ಧಿಪಡಿಸಿ ಪ್ರಸ್ತುತಪಡಿಸಲಾಗಿದೆ. ಎಲ್ಲವನ್ನೂ ಇಲ್ಲಿ ವಿವರಿಸಲಾಗದು. ಕೆಲವು ಪ್ರಮುಖ ಅಂಶಗಳನ್ನಷ್ಟೇ ವಿವರಿಸುವ ಪ್ರಯತ್ನ ಮಾಡಲಾಗಿದೆ.

#ಸಂವಹನ ನಿರ್ವಹಣೆ : 
ಶಿಕ್ಷಣ ಸಂಸ್ಥೆ ಮತ್ತು ಪೋಷಕರ ನಡುವಿನ ನಿರಂತರ ಮತ್ತು ಅಡಚಣೆ ರಹಿತ ಸಂವಹನ ಬಹಳ ಪ್ರಮುಖವಾದುದು. ಈ ಸಾಪ್ಟ್ ವೇರ್ ತಂತ್ರಜ್ಞಾನವನ್ನು ಬಳಸಲು ಬೇಕಾಗುವ ಕಾರಣಗಳಲ್ಲಿ ಪ್ರಮುಖವಾದುದೆಂದರೆ, ನಿರಂತರ ಸಂವಹನ ನಿರ್ವಹಣೆಯ ಸಾಮರ್ಥ್ಯ. ಸಂವಹನವು ಆರೋಗ್ಯಕರವಾದಾಗ ಅದು ಸಂಬಂಧಗಳ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎನ್ನುವುದು ಸಾಮಾನ್ಯ ಜ್ಞಾನ.

ಈ ಸಾಪ್ಟ್ ವೇರ್ ತಂತ್ರಜ್ಞಾನದ ಮೂಲಕ ಎಲ್ಲಾ ಸಮಯದಲ್ಲೂ ಸಂಸ್ಥೆಯು ಪೋಷಕರೊಂದಿಗೆ ಎಲೆಕ್ಟ್ರಾನಿಕ್ ಮಾಧ್ಯಮಗಳ (ಎಸ್ಸೆಮ್ಮೆಸ್, ಆ್ಯಪ್ ನೋಟಿಫಿಕೇಶನ್, ಈಮೇಲ್) ಮೂಲಕ ಸಂವಹನದಲ್ಲಿ ತೊಡಗಿಸಿಕೊಳ್ಳಬಹುದು.

# ಪರೀಕ್ಷೆಗಳ ನಿರ್ವಹಣೆ:
ಶಿಕ್ಷಣ ಸಂಸ್ಥೆಗಳು ಈ ಸಾಪ್ಟ್ ವೇರ್ ತಂತ್ರಜ್ಞಾನವನ್ನು ಬಳಸುವುದರ ಮೂಲಕ ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯ. ಎಷ್ಟು ಮುಖ್ಯವಾದ ಪರೀಕ್ಷೆಗಳಿವೆ, ಎಷ್ಟು ವಿದ್ಯಾರ್ಥಿಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದಾರೆನ್ನುವ ಅಂಕೆ ಸಂಖ್ಯೆ ಬೆರಳ ತುದಿಯಲ್ಲಿ ಪಡೆಯಲು ಸಹಾಯಕ ಈ ಸಾಪ್ಟ್ ವೇರ್ ತಂತ್ರಜ್ಞಾನ.

ಪರೀಕ್ಷೆ ಪ್ರವೇಶ ಪತ್ರದಿಂದ ಆರಂಭಿಸಿ ಮುದ್ರಣಕ್ಕೆ ತಯಾರಾಗಿರುವ ಅಂಕಪಟ್ಟಿಯನ್ನು ಕೇವಲ ಒಂದು ಕ್ಲಿಕ್‌ನಿಂದ ಪಡೆದುಕೊಳ್ಳಲು ಸಾಧ್ಯ. ಪ್ರತಿಯೋರ್ವ ವಿದ್ಯಾರ್ಥಿಯ ಪ್ರತಿ ವಿಷಯದ ಮೇಲೆ ಪ್ರತ್ಯೇಕ ಪರೀಕ್ಷೆಗಳಲ್ಲಿನ ಸಾಧನೆಗಳನ್ನು ಮತ್ತು ಅಭಿವೃದ್ಧಿಯನ್ನು ಒಂದೇ ಸ್ಥಳದಲ್ಲಿ ಪಡೆಯಲು ಸಹಕಾರಿ.

# ಹಾಜರಾತಿ ನಿರ್ವಹಣೆ:
ಈ ಸಾಪ್ಟ್ ವೇರ್ ತಂತ್ರಜ್ಞಾನದ ಮೂಲಕ ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ, ಭೋದಕ ಮತ್ತು ಭೋದಕೇತರ ಸಿಬಂದಿ ಕೂಡಾ ತಮ್ಮ ಹಾಜರಾತಿಯನ್ನು ಕಾಗದರಹಿತವಾಗಿ ನಿರ್ವಹಿಸಬಹುದು. ಹಲವು ರೀತಿಯಲ್ಲಿ ಹಾಜರಾತಿಯನ್ನು ಪಡೆಯಬಹುದು.

RFID ಟೆಕ್ನಾಲಜಿಯನ್ನು ಬಳಸಿ, ಮೊಬೈಲ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಅಳವಡಿಸಲು ಅವಕಾಶವಿರುವ ಆ್ಯಪ್ ಮುಖೇನ ಕೂಡ ಹಾಜರಾತಿಯನ್ನು ಪಡೆದುಕೊಳ್ಳಬಹುದಾಗಿದೆ. ವಿದ್ಯಾರ್ಥಿಯ ಪೋಷಕರಿಗೆ ತುರ್ತಾಗಿ ಎಸ್ಸೆಮ್ಮೆಸ್ ಮುಖೇನ ಗೈರು ಹಾಜರಾತಿ, ಹಾಜರಾತಿ ಕಡಿಮೆಯಿದ್ದಲ್ಲಿ ಪೂರ್ವವಾಗಿ ತಿಳಿಸುವ ವ್ಯವಸ್ಥೆ ಕೂಡ ಇದರಲ್ಲಿದೆ.

# ಶುಲ್ಕ ನಿರ್ವಹಣೆ:
ಹಲವು ವಿದ್ಯಾರ್ಥಿಗಳಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ರೀತಿಯ ಶುಲ್ಕಗಳನ್ನು ಹಲವು ಬಾರಿ ಪಡೆದುಕೊಳ್ಳಲಾಗುತ್ತದೆ. ಇವುಗಳ ನಿರ್ವಹಣೆ ಅಷ್ಟು ಸುಲಭದ ಕೆಲಸವಲ್ಲ. ಆಡಳಿತ ಮಂಡಳಿಗೆ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲು ಇಂದಿನವರೆಗೆ ಎಷ್ಟು ಶುಲ್ಕ ಬಂದಿದೆ, ಎಷ್ಟು ಬಾಕಿ ಇದೆ, ಯಾರಿಂದ ಬಾಕಿ ಇದೆ, ಯಾವ ರೀತಿಯ ಶುಲ್ಕ ಎಷ್ಟೆಷ್ಟು ಬಂದಿದೆ, ಮತ್ತಿತ್ಯಾದಿ ವಿವರಗಳ ಅಗತ್ಯ ಪದೇ ಪದೇ ಎದುರಾಗುತ್ತಿರುತ್ತದೆ.

ಈ ವಿವರಗಳನ್ನು ತ್ವರಿತವಾಗಿ ಮತ್ತು ಖರಾರುವಾಕ್ಕಾಗಿ ಲೆಕ್ಕ ಹಾಕುವುದೇ ಒಂದು ಸಾಧನೆ. ಈ ಸಾಪ್ಟ್ ವೇರ್ ತಂತ್ರಜ್ಞಾನದ ಮೂಲಕ ಕೇವಲ ಒಂದು ಕ್ಲಿಕ್‌ನಿಂದ ಎಲ್ಲವನ್ನೂ ಪಡೆದುಕೊಳ್ಳಲು ಸಾಧ್ಯ. ಇದರ ಇನ್ನೊಂದು ವಿಶೇಷತೆಯೆಂದರೆ, ಪೋಷಕರಿಗೆ ಸ್ವಯಂಚಾಲಿತವಾಗಿ ಮರು ಜ್ಞಾಪನೆಯನ್ನು ಎಸ್ಸೆಮ್ಮೆಸ್, ಆ್ಯಪ್ ಮುಖೇನ ಇಲ್ಲವೇ ಈಮೇಲ್ ಮುಖೇನ ಕಳುಹಿಸುವ ವ್ಯವಸ್ಥೆಯಿದೆ. ಇದಕ್ಕೆ ಯಾವುದೇ ಮಾನವ ಶಕ್ತಿಯ ಅಗತ್ಯವಿರುವುದಿಲ್ಲ. ಪೋಷಕರು ಆನ್ಲೈನ್ ಮುಖೇನ ಶುಲ್ಕ ಪಾವತಿಸುವ ವ್ಯವಸ್ಥೆಯನ್ನು ಕೂಡಾ ಅಳವಡಿಸಲಾಗಿದೆ.

# ಮಾಹಿತಿ ಸಂಗ್ರಹ ಮತ್ತು ನಿರ್ವಹಣೆ:
ಶಿಕ್ಷಣ ಸಂಸ್ಥೆಯ ಸೇವೆ ಪಡೆಯುತ್ತಿರುವ ಸಾವಿರಾರು ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಹಾಲಿ ಮಾಜಿ ಭೋದಕ ಮತ್ತು ಭೋದಕೇತರ ಸಿಬಂದಿಯ ಮಾಹಿತಿಯನ್ನು ನಿರ್ವಹಿಸುವುದು, ಸಂಗ್ರಹಿಸಿ ಇಡುವುದು, ಎಲ್ಲೋ ಕಾಗದದ ರೂಪದಲ್ಲಿ ಸಂಗ್ರಹಿಸಿದ ಕಡತಗಳನ್ನು ಮರು ಪಡೆಯುವುದು ನಿಧಾನ ಗತಿಯ ಮತ್ತು ಬಹಳ ಮಾನವಶಕ್ತಿಯನ್ನು ಉಪಯೋಗಿಸಿಕೊಳ್ಳುವ ಕಾರ್ಯವಾಗಿರುತ್ತದೆ. ಈ ಮೇಲಿನ ಎಲ್ಲ ಮಾಹಿತಿಗಳು ಬೆರಳ ತುದಿಯಲ್ಲಿದ್ದರೆ ಎಷ್ಟು ಚೆನ್ನಾಗಿರುವುದಲ್ಲವೆ? ಈ ಕಾರ್ಯವನ್ನು ಈಜೀನಿಯಸ್ ಶೈಕ್ಷಣಿಕ ನಿರ್ವಹಣಾ ವ್ಯವಸ್ಥೆಯ ಸಾಪ್ಟ್ ವೇರ್ ತಂತ್ರಜ್ಞಾನ ನಿಮಗೆ ಅತಿ ಸುಲಭವಾಗಿಸುತ್ತದೆ.

ಈ ಮೇಲೆ ತಿಳಿಸಿರುವ ಕಾರ್ಯ ವೈಖರಿಗಳು ಕೇವಲ “ಟಿಪ್ ಆಫ್ ಐಸ್‌ಬರ್ಗ್” ಅಷ್ಟೆ. ನಮ್ಮ ಅಧ್ಯಯನದ ಪ್ರಕಾರ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ವಿಭಿನ್ನವಾಗಿರುತ್ತವೆ. ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಕೂಲಂಕುಷವಾಗಿ ಅದ್ಯಯನ ಮಾಡಿದ ಬಳಿಕ ಅವಶ್ಯಕತೆಗೆ ಅನುಗುಣವಾಗಿ ಬದಲಾವಣೆ ಮಾಡಲಾಗುತ್ತದೆ.

ಇನ್ನೂ ಹೆಚ್ಚಿನ ಮಾಡ್ಯೂಲ್ ಗಳ ಮಾಹಿತಿಯನ್ನು ತಿಳಿಯಬೇಕಾದಲ್ಲಿ www.egenius.in ಪುಟವನ್ನು ಓದಿ. ಮುಕ್ತವಾಗಿ ಮಾತನಾಡಲು ಕಾರ್ಯವಾಹಕ ನಿರ್ದೇಶಕ ಹಾಗೂ ಮಾರಾಟ ಮುಖ್ಯಸ್ಥ ಸುಧೀರ್ ಶೆಟ್ಟಿಯವರನ್ನು sudeer@erelego.com ಮತ್ತು +919986994328 ನಲ್ಲಿ ಕೂಡಾ ಸಂಪರ್ಕಿಸಬಹುದು.

Facebook Comments

Sri Raghav

Admin